Advertisement

ಸೈಕ್ಲ್ಯೋನ್: ನ 26ರಿಂದ ಮತ್ತೆ ಮಳೆ ; ಸಚಿವ ಆರ್.ಅಶೋಕ್ ಎಚ್ಚರಿಕೆ

03:18 PM Nov 25, 2021 | Team Udayavani |

ಬೆಂಗಳೂರು : ಎರಡನೇ ಸೈಕ್ಲ್ಯೋನ್ ಪ್ರಭಾವ ಹಳೇ ಮೈಸೂರು ಹಾಗೂ ಉಡುಪಿ ಭಾಗದವರೆಗೂ ಆಗಲಿದೆ, ಈ ನಿಟ್ಟಿನಲ್ಲಿ ನವೆಂಬರ್ 26,27 ಮತ್ತು 28 ರಂದು ಜಿಲ್ಲಾಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆರ್. ‌ಅಶೋಕ್ ಗುರುವಾರ ಸೂಚನೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿಸಚಿವ ಆರ್.‌ಅಶೋಕ್ ಹೇಳಿಕೆ ನೀಡಿ, ‘ಮೂರು ದಿನಗಳ ಕಾಲ ಎಚ್ಚರಿಕೆಯಿಂದ ಇರಬೇಕು, ಬೆಂಗಳೂರಿನಲ್ಲೂ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಮಳೆ ಹಾನಿ ನಿಭಾಯಿಸಲು ಅಧಿಕಾರಿಗಳ ತಂಡವನ್ನು ಸಿಎಂ ರಚನೆ ಮಾಡಿದ್ದಾರೆ. ನಾನೂ‌ ನಿಗಾ ಇಟ್ಟಿದ್ದೇನೆ’ ಎಂದು ಸರ್ಕಾರದ ಕ್ರಮ ಸಮರ್ಥಿಸಿಕೊಂಡರು.

‘ಚುನಾವಣೆಗಿಂತ ಮಳೆ ಹಾನಿ ಸಮಸ್ಯೆ ಮುಖ್ಯವಾಗಿದೆ. ಇದಕ್ಕೆ ಆದ್ಯತೆ ನೀಡಬೇಕು. ಚುನಾವಣೆ ಕೆಲಸ ಬಹುತೇಕ ಮುಗಿದಿದೆ. ಈ ನಿಟ್ಟಿನಲ್ಲಿ ಮಳೆ ಹಾನಿ ಸಮಸ್ಯೆ ಬಗೆಹರಿಸಲು ಆದ್ಯತೆ ಕೊಡಬೇಕಾಗಿದೆ. ನವೆಂಬರ್ 30 ರೊಳಗೆ ಬೆಳೆ ಹಾನಿ ವರದಿ ನೀಡಬೇಕು. ಪರಿಹಾರ ನೀಡುವ ಸಂದರ್ಭದಲ್ಲಿ ಕಟಾವು ಮಾಡಿದ ಬೆಳೆಯನ್ನೂ ಪರಿಗಣಿಸುತ್ತೇವೆ ಕೇವಲ ರಾಗಿ ಮಾತ್ರವಲ್ಲ, ಎಲ್ಲಾ ಬೆಳೆಗಳಿಗೆ ಪರಿಹಾರ ಕೊಡುತ್ತೇವೆ. ಬೆಳೆ ಪರಿಹಾರ ಕುರಿತು ಕಾಂಗ್ರೆಸ್ ಅಪಾದನೆ ಸುಳ್ಳು. ಡಾ. ಮನಮೋಹನ್ ಸಿಂಗ್ ಸರ್ಕಾರ ಬಿಡುಗಡೆ ಮಾಡಿದ್ದ‌ ಪರಿಹಾರ ಹಣಕ್ಕಿಂದ ಮೂರು ಪಟ್ಟು ಹೆಚ್ಚು ಹಣವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೀಡಿದೆ. ಅಂಕಿ ಅಂಶಗಳನ್ನು ನೋಡಿ, ಕಾಮಾಲೆ ಕಣ್ಣು ಬಿಟ್ಟು ನೋಡಿ’ ಎಂದು ತಿರುಗೇಟು ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next