ಕುಷ್ಟಗಿ: 68ರ ವಯೋಮಾನದ ವಿಜಯಪುರದ ನಿವೃತ್ತ ಆರೋಗ್ಯ ನಿರೀಕ್ಷಕ, ಹನುಮ ಭಕ್ತರೊಬ್ಬರು ವಿಜಯಪುರದಿಂದ ಅಂಜನಾದ್ರಿಗೆ ವಿರಮಿಸದೇ ಎರಡು ದಿನಗಳ ಸೈಕಲ್ ಯಾತ್ರೆಯ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ಶುಕ್ರವಾರ ಬೆಳಗಿನ ಜಾವ 6ಕ್ಕೆ ವಿಜಯಪುರದಿಂದ ಸೈಕಲ್ ಆರಂಭಿಸಿದ ಸೈಕಲ್ ಯಾತ್ರೆ ಕುಷ್ಟಗಿ ತಾಲೂಕಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ವಣಗೇರಿ ಟೋಲ್ ಪ್ಲಾಜಾ ವರೆಗೆ 135 ಕಿ.ಮೀ. ಕ್ರಮಿಸಿದ್ದು ಶನಿವಾರ ಸಂಜೆಯ ವೇಳೆಗೆ ಅಂಜನಾದ್ರಿ ತಲುಪಿ ಆಂಜನೇಯ ದರ್ಶನ ಪಡೆಯುವುದಾಗಿ ನಿವೃತ್ತ ಆರೋಗ್ಯ ನಿರೀಕ್ಷಕ ಬಸವರಾಜ್ ದೇವರ ತಿಳಿಸಿದ ಪುನಃ ಎರಡು ದಿನಗಳಲ್ಲಿ ವಿಜಯಪುರಕ್ಕೆ ಮರಳುವುದಾಗಿ ತಿಳಿಸಿದರು. ಈ ರೀತಿಯ ಸೈಕಲ್ ಯಾತ್ರೆಯಿಂದ ಬಿಪಿ, ಶುಗರ್ ನಿಯಂತ್ರಣದಲ್ಲಿರುತ್ತವೆ.
ಇಂತಹ ಪ್ರೇಕ್ಷಣಿಯ ಸ್ಥಳಗಳಿಗೆ ಸಾರ್ವಜನಿಕವಾಗಿ ಬೈಕ್, ಕಾರುಗಳಲ್ಲಿ ತೆರಳದೇ ಸೈಕಲ್ ಯಾತ್ರೆಯಿಂದ ದೇಹಾರೋಗ್ಯ ಸುಧಾರಿಸಲಿದ್ದು, ದೇಶ ಆಮದು ಮಾಡಿಕೊಳ್ಳುವ ಪೆಟ್ರೋಲ್, ಡೀಸೇಲ್, ಕಚ್ಚಾ ತೈಲಾ ಹೊರೆ ತಗ್ಗಿಸಲು ಸಾದ್ಯವಿದೆ. ಇದರಿಂದ ವಿದೇಶ ಉಳಿತಾಯ ಸಾದ್ಯವಾಗಲಿದ್ದು, ಅಲ್ಲದೇ ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗಿದ್ದು, ಮರು ಬಳಕೆಗೆ ಆದ್ಯತೆವಹಿಸುವುದು ಅಗತ್ಯವಿದೆ ಎಂದರು.