Advertisement

ಎಚ್ಚರ..ಕಂಪ್ಯೂಟರ್ ಗಳಿಗೆ ಕನ್ನ ಹಾಕಲು ಎಕ್ಸೆಲ್ ಮ್ಯಾಕ್ರೋ ಬಳಕೆ!

05:50 PM Jul 12, 2021 | Team Udayavani |

ಎಷ್ಟೇ ಪ್ರಯತ್ನಪಟ್ಟರು ಕೂಡ ಸೈಬರ್ ದಾಳಿಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಕಂಫ್ಯೂಟರ್ ಗಳಿಗೆ ಕನ್ನ ಹಾಕಲು ಚೋರರು ನೂತನ ವಿಧಾನವನ್ನು ಕಂಡುಕೊಂಡಿದ್ದು, ಎಕ್ಸೆಲ್ ಮ್ಯಾಕ್ರೋ ಮೂಲಕ ವೈರಸ್ ಹರಿ ಬಿಡುತ್ತಿದ್ದಾರೆ.

Advertisement

ಇತ್ತೀಚಿನ ಸಂಶೋಧನೆಗಳು ನೀಡಿರುವ ವರದಿಯಂತೆ 2021ರ ಅವಧಿಯಲ್ಲಿ ಸೈಬರ್ ಕ್ರಿಮಿನಲ್ ಗಳು ಲೋಡರ್ ಹಾಗೂ ಕ್ವಾಕ್ ಬಾಟ್ ಹೆಸರಿನ ವೈರಸ್ ಹರಿಬಿಡಲು ಎಕ್ಸಲ್ 4.0 ಫೈಲ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ.  ಈ ದಾಳಿಯಿಂದ ಈಗಾಗಲೇ ಹಲವು ಕಂಪನಿಗಳು ಮತ್ತು ವ್ಯಕ್ತಿಗಳು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಎಚ್ಚರಿಕೆ ಅಗತ್ಯ ಎನ್ನುತ್ತಿವೆ ವರದಿಗಳು.

ಸೈಬರ್ ಖದೀಮರು ಒಂದು ರೀತಿಯ ಮ್ಯಾಕ್ರೊ ಸ್ಪ್ರೆಡ್‌ಶೀಟ್ ಫೈಲ್‌ಗಳನ್ನು ತಮ್ಮ ದಾಳಿಗೆ ಬಳಸಿಕೊಳ್ಳುತ್ತಿದ್ದಾರೆ.  ಮ್ಯಾಕ್ರೋ ಎನ್ನುವುದು ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು ಬಳಸುವ ಸೂಚನೆಗಳ ಒಂದು ಗುಂಪಾಗಿದೆ. ಮ್ಯಾಕ್ರೋಗಳನ್ನು ಮೈಕ್ರೊಸಾಫ್ಟ್‌ನ ವಿಬಿಎ – ಎಕ್ಸೆಲ್ ವರ್ಕ್‌ಬುಕ್‌ನೊಳಗಿನ ಅಪ್ಲಿಕೇಶನ್‌ಗಳಿಗಾಗಿ ವಿಷುಯಲ್ ಬೇಸಿಕ್‌ನೊಂದಿಗೆ ಪ್ರೋಗ್ರಾಮ್ ಮಾಡಲಾಗಿರುತ್ತದೆ.

ಈ ರೀತಿಯ ದಾಳಿಗಳನ್ನು ಮಟ್ಟಹಾಕಲು ಮೈಕ್ರೊ ಸಾಪ್ಟ್ ಕೂಡ ಕಾರ್ಯೋನ್ಮುಖವಾಗಿದ್ದು, ಸ್ವಯಂಚಾಲಿತವಾಗಿ ಮ್ಯಾಕ್ರೋಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಆದರೆ ಆಕ್ರಮಣಕಾರರು ಇ-ಮೇಲ್ ಸ್ವೀಕರಿಸುವವರನ್ನು ವರ್ಡ್ ಡಾಕ್ಯುಮೆಂಟ್ ಒಳಗೆ ಗೋಚರಿಸುವ ಸಂದೇಶದೊಂದಿಗೆ ಸಕ್ರಿಯಗೊಳಿಸಲು ಪ್ರಯತ್ನಿಸುತ್ತಾದೆ.

Advertisement

Udayavani is now on Telegram. Click here to join our channel and stay updated with the latest news.

Next