Advertisement
ಘಟನೆ -1
Related Articles
Advertisement
ಘಟನೆ-3
ಪೂರ್ಣಿಮಾ ಎಂಬವರಿಗೆ ನ್ಯಾಪ್‌ಟಾಲ್ ಕಂಪೆನಿಯಿಂದ ಸ್ಕ್ಯಾಚ್ ವಿನ್ ಎಂಬ ಕೂಪನ್ ಪೋಸ್ಟ್ ಮೂಲಕ ಬಂದಿದ್ದು, ಆ ಕೂಪನ್‌ನಲ್ಲಿ 14,80,000 ರೂ. ವಿಜೇತರಾಗಿದ್ದೀರಿ ಎಂದು ತಿಳಿಸಲಾಗಿತ್ತು. ಈ ಬಗ್ಗೆ ಅದರಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿ ಸಿದಾಗ ತಾನು ನ್ಯಾಪ್‌ಟಾಲ್ ಕಂಪೆನಿಯವರೆಂದು ನಂಬಿಸಿ ಹಣ ಪಡೆಯಲು ಸರ್ವಿಸ್ ಚಾರ್ಜ್, ಸರ್ಚ್, ಎನ್ ಒಸಿ ಆ್ಯಂಡ್ ಎಲ್‌ವೊಸಿ ಚಾರ್ಜ್, ಸೆಕ್ಯೂರಿಟಿ ಡೆಪೋಸಿಟ್, ಜಿಎಸ್‌ಟಿ ಮತ್ತು ಸೆಂಟ್ರಲ್ ತೆರಿಗೆ ಹಾಗೂ ಇತರ ಖರ್ಚುಗಳಿಗಾಗಿ ಒಟ್ಟು 15,33,934 ರೂ.ಗಳನ್ನು ಪೂರ್ಣಿಮಾ ಅವರಿಂದ ಆರೋಪಿ ಆತನ ಬೇರೆ ಬೇರೆ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಜಮೆ ಮಾಡಿಸಿಕೊಂಡಿದ್ದ.
ಘಟನೆ-4
ಮಲ್ಲಾರುವಿನ ಶಶಿಕಾಂತ ಆಚಾರ್ಯ ಅವರು ಟೆಲಿಗ್ರಾಂ ಆ್ಯಪ್‌ನಲ್ಲಿ ಪಾರ್ಟ್ ಟೈಮ್ ಜಾಬ್ ಹುಡುಕುತ್ತಿದ್ದು ಅದರಲ್ಲಿ ವಸ್ತುಗಳನ್ನು ಖರೀದಿಸಿ ಸೇಲ್ ಮಾಡುವ ಬಗ್ಗೆ ಸ್ನಾಪ್‌ಡೀಲ್ ಶಾಪಿಂಗ್ ಆ್ಯಪ್ ಡೌನ್‌ಲೋಡ್ ಮಾಡಿ 200 ರೂ. ರಿಚಾರ್ಜ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ 413 ರೂ. ಹಾಗೂ 1,472 ರೂ. ಅವರ ಖಾತೆಗೆ ಜಮೆ ಆಗಿತ್ತು. ಅನಂತರ ಬೇರೊಂದು ಮೊಬೈಲ್ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬ ತಾನು ಸ್ನಾಪ್‌ಡೀಲ್ ಶಾಪಿಂಗ್ ಮ್ಯಾನೇಜರ್ ಎಂದು ತಿಳಿಸಿ, ಟಾಸ್ಕ್ ಗಳನ್ನು ಮಾಡಲು 3,26,887 ರೂ.ಗಳನ್ನು ಅವರ ಸ್ನಾಪ್‌ಡೀಲ್ ಶಾಪಿಂಗ್ ಖಾತೆಗೆ ಅವರಿಂದ ಜಮೆ ಮಾಡಿಸಿದ್ದರು. ಆದರೆ, ಅದರಲ್ಲಿರುವ ವಸ್ತುಗಳನ್ನು ಸೇಲ್ ಮಾಡುವ ಬಗ್ಗೆ ಆನ್‌ಲೈನ್ ಮೂಲಕ 2,06,050 ರೂ. ಪಡೆದು ಕಳುಹಿಸಿದ ಹಣವನ್ನು ವಾಪಾಸು ನೀಡದೇ ನಷ್ಟ ಉಂಟು ಮಾಡಿದ್ದರು.
ಮಾಹಿತಿ ಅಗೋಚರ
ವಿದೇಶ ಸಹಿತ ಉತ್ತರ ಭಾರತದಲ್ಲಿ ಐಟಿ-ಬಿಟಿ ಹೆಸರಿನಲ್ಲಿ ನಕಲಿ ಕಂಪೆನಿಗಳು ಕಾರ್ಯಾ ಚರಣೆ ಮಾಡುತ್ತಿದ್ದು, ವ್ಯವಸ್ಥಿತವಾಗಿ ದಕ್ಷಿಣ ಭಾರತದವರನ್ನು ಟಾರ್ಗೆಟ್ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ.
ಜಸ್ಟ್ ಡಯಲ್ ಸಹಿತ ಇತರ ಮೂಲಗಳಿಂದ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಲಿಂಕ್‌ಗಳನ್ನು ರವಾನಿಸಲಾಗುತ್ತದೆ. ಕರೆಗಳನ್ನು ಮಾಡಿ ದಾರಿ ತಪ್ಪಿಸಿ ಹಣ ದೋಚುವ ಖದೀಮರೂ ಇದ್ದಾರೆ. ಕೆಲವೇ ಕ್ಷಣದಲ್ಲಿ ನಮ್ಮ ಖಾತೆಯಲ್ಲಿದ್ದ ಸಾವಿರ, ಲಕ್ಷ, ಕೋಟಿಗಳು ಮಂಗಮಾಯವಾದ ದೂರುಗಳೂ ಈಗಾಗಲೇ ಹಲವೆಡೆ ದಾಖಲಾಗಿರುವುದು ಇದಕ್ಕೆ ನಿದರ್ಶನವಾಗಿದೆ.
ಆನ್‌ಲೈನ್ ಹನಿಟ್ರ್ಯಾಪ್
ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ವೀಡಿಯೋ ಕರೆ ಮಾಡಿ ಅಪರಿಚಿತ ಯುವತಿ ಅರೆನಗ್ನ ಸ್ಥಿತಿಯಲ್ಲಿ ಮಾತನಾಡುತ್ತಾಳೆ. 10ರಿಂದ 15 ನಿಮಿಷಗಳಲ್ಲಿ ಮಾತುಕತೆ ಮುಗಿದುಹೋಗುತ್ತದೆ. ಅನಂತರ ಕರೆ ನಿಷ್ಕ್ರಿಯ. ಬಳಿಕ 5 ನಿಮಿಷಗಳ ಅಂತರದಲ್ಲಿ ನಮ್ಮ ಮುಖವನ್ನು ಎಡಿಟ್ ಮಾಡಿ ಅಶ್ಲೀಲವಾಗಿ ಬಿಂಬಿಸಿ ಹಣ ಪೀಕುವ ಕೆಲಸವಾಗುತ್ತದೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡಲಾಗುತ್ತದೆ. ಇಂತಹ ಪ್ರಕರಣಗಳೂ ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ. ಕೆಲವರು ಮಾನ-ಮರ್ಯಾದೆ ಹೋಗುವುದು ಬೇಡ ಎಂದು ಖದೀಮರು ಕೇಳಿದಷ್ಟು ಹಣ ನೀಡಿ ಸುಮ್ಮನಾಗುತ್ತಾರೆ. ಆದರೆ ಇವರೂ ಮತ್ತೂ ಹೆಚ್ಚಿನ ಹಣಕ್ಕೆ ಬೇಡಿಕೆ ಒಡ್ಡುತ್ತಾರೆ. ಕೊನೆಗೆ ಸೈಬರ್ ಠಾಣೆಗೆ ದೂರು ನೀಡಲಾಗುತ್ತದೆ. ಅನಾಮಧೇಯ ವ್ಯಕ್ತಿಗಳು ವೀಡಿಯೋ ಕರೆ ಮಾಡಿದರೆ ಅದಕ್ಕೆ ಪ್ರತಿಕ್ರಿಯಿಸಬಾರದು. ಪ್ರತಿಕ್ರಿಯಿಸಿದರೂ ಹಣ ನೀಡಲು ಹೋಗಬಾರದು ಎನ್ನುತ್ತಾರೆ ಸೈಬರ್ ಠಾಣೆಯ ಪೊಲೀಸರು.
ವಂಚನೆಗೊಳಗಾದವರು ಹೀಗೆ ಮಾಡಿ: ಆನ್‌ಲೈನ್ ಮೂಲಕ ಹಣದ ವಂಚನೆಗೆ ಒಳಗಾದವರು ಕೇಂದ್ರ ಸರಕಾರದಿಂದ ಸಹಾಯಕ್ಕಾಗಿ ಇರುವ national cyber crime reporting portal website ಗೆ ಕೂಡಲೇ ಮಾಹಿತಿ ನೀಡಬೇಕು. ತತ್‌ಕ್ಷಣ ಗ್ರಾಹಕರ ಖಾತೆ ಹಾಗೂ ಹಣ ವರ್ಗಾವಣೆಗೊಂಡ ಖಾತೆ ಎರಡೂ freeze ಆಗುತ್ತದೆ. ಹಣ ವರ್ಗಾವಣೆ ಆಗುವುದಿಲ್ಲ. ಇದನ್ನು “ಗೋಲ್ಡನ್ ಹವರ್’ ಎಂದು ಕರೆಯುತ್ತಾರೆ. ಹೆಚ್ಚಿನ ಮಾಹಿತಿಗೆ ಸೈಬರ್ ಪೊಲೀಸ್ ಠಾಣೆ (0820-25350021, 9480805410) ಗೆ ಮಾಹಿತಿ ನೀಡಬಹುದು. –ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ
-ಪುನೀತ್ ಸಾಲ್ಯಾನ್