Advertisement
ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಸೈಬರ್ ಅಪರಾಧಗಳ ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸೈಬರ್ ಕ್ರೈಂ ಇಂದು ಪ್ರತ್ಯೇಕವಾಗಿ ಉಳಿದಿಲ್ಲ. ಪ್ರತಿಯೊಂದು ಪ್ರಕರ ಣದ ತನಿಖೆಯಲ್ಲೂ ಸೈಬರ್ ಕ್ರೈಂನ ಅಂಶ ಕಾಣಬಹುದು. ಇತ್ತೀಚೆಗೆ ದಾಖಲಾಗುತ್ತಿರುವ ಕೆಲವು ಪ್ರಕರಣಗಳು ಇವೆಲ್ಲವನ್ನೂ ಮೀರಿ ಪೊಲೀಸ್ ಇಲಾಖೆಗೆ ಸವಾಲಾ ಗುತ್ತಿವೆ. ಈ ನಿಟ್ಟಿನಲ್ಲಿ ಸೈಬರ್ ಕ್ರೈಂಗೆ ಪೂರಕವಾದ ಕಾನೂನಿನಲ್ಲಿ ಬದಲಾವಣೆ ಮಾಡಬೇಕಾಗಿದೆ. ಎಲ್ಲ ರೀತಿಯ ಸೈಬರ್ ಕ್ರೈಂಗಳನ್ನು ಭೇದಿಸುವಲ್ಲಿ ಕೆಲವೊಮ್ಮೆ ತಜ್ಞರೂ ವಿಫಲರಾಗುತ್ತಾರೆ. ತಂತ್ರಜ್ಞಾನ ಬಳಸಿಕೊಂಡು ತನಿಖೆಯ ಕಾರ್ಯ ವಿಧಾನದಲ್ಲಿ ಬದಲಾವಣೆಯಾಗ ಬೇಕು ಎಂದರು.
ಕೆಲವು ಅಪರಾಧಿಗಳು ಸುಳ್ಳು ಮಾಹಿತಿ ನೀಡಿ ಜನರ ಹಣ ದೋಚುತ್ತಾರೆ. ಇಂತಹ ಪ್ರಕರಣಗಳು ನಡೆದಾಗ ಕಾಲ್ ಡಾಟಾ ರೆಕಾರ್ಡ್ ಮೂಲಕ ಪರಿಶೀಲನೆ ನಡೆಸಿ ಅಪರಾಧಿಗಳ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ಇನ್ನು ವಾಟ್ಸ್‌ಆ್ಯಪ್ ಹಾಗೂ ಐಫೋನ್‌ಗಳಲ್ಲಿ ಡೇಟಾ ಪಡೆಯಲು ಸಾಧ್ಯವಾಗದೆ ತನಿಖೆಗೆ ಸವಾಲಾಗಿ ಪರಿಣಮಿಸುವ ಪ್ರಕರಣಗಳು ಕೂಡ ಇವೆ. ಸೈಬರ್ ಕ್ರೈಂಗಳನ್ನು ಪತ್ತೆ ಹಚ್ಚಿ ಸಾಬೀತು ಪಡಿಸುವಲ್ಲಿ ಡಿಜಿಟಲ್ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಒದಗಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಇಂತಹ ಪ್ರಕರಣಗಳ ಬಗ್ಗೆ ಜನರೂ ಜಾಗೃತರಾಗಬೇಕು ಎಂದರು. ಪತ್ತೆ ಸುಲಭವಲ್ಲ
ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಮಾತನಾಡಿ, ಸೈಬರ್ ಅಪರಾಧ ಪತ್ತೆಹಚ್ಚುವುದು ಅನ್ಯ ಅಪರಾಧಗಳನ್ನು ಭೇದಿಸುವಷ್ಟು ಸುಲಭವಲ್ಲ. ಹೊಸ ಹೊಸ ಆವಿಷ್ಕಾರಗಳು ಹೆಚ್ಚಾಗುತ್ತಿದ್ದಂತೆ ಸೈಬರ್ ಅಪ ರಾಧಗಳು ಕೂಡಹೆಚ್ಚಾಗುತ್ತಿವೆ. ಯಾವುದೇ ಸೈಬರ್ ಅಪರಾಧ ನಡೆದಾಗ ತತ್‌ಕ್ಷಣ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೂಡಲೇ ಸ್ಥಗಿತಗೊಳಿ
ಸಲು ಸಂಬಂಧಪಟ್ಟ ವರಿಗೆ ಸೂಚನೆ ನೀಡಬೇಕು. ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಇಲಾಖಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆತಲ್ಲಿ ಪ್ರಕರಣ ಭೇದಿಸಲು ಸಹಾಯಕ ವಾಗುವು ದಲ್ಲದೆ, ಕೌಶಲವೂ ಬೆಳೆಯುತ್ತದೆ ಎಂದರು.
Related Articles
ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಮಾತನಾಡಿ, ತಂತ್ರಜ್ಞಾನ ಬೆಳೆಯುತ್ತಿರುವಂತೆ ನಮ್ಮ ಸಾಮಾನ್ಯ ಜ್ಞಾನ ವೃದ್ಧಿಸಿಕೊಂಡಲ್ಲಿ ನಾವೂ ಬೆಳೆಯಲು ಸಾಧ್ಯ. ಶಾಲೆಗಳಲ್ಲಿ 8ನೇ ತರಗತಿಯಿಂದಲೇ ಸಾಮಾಜಿಕ ಜಾಲತಾಣಗಳಿಂದಾಗುವ ಸಮಸ್ಯೆ ಕುರಿತು ಮಾಹಿತಿ ನೀಡುವ ಕೆಲಸಗಳು ನಡೆಯಬೇಕಾಗಿದೆ ಎಂದರು.
Advertisement
ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಮಾತ ನಾಡಿ, ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಉಪ ಯುಕ್ತವಾಗಿದೆ ಎಂದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ| ಸಂಜೀವ್ ಪಾಟೀಲ್ ವಂದಿಸಿದರು.