ಹೊಸದಿಲ್ಲಿ: ಕಪ್ಪುಹಣ ಚಲಾವಣೆ ಮೇಲೆ ನಿಯಂತ್ರಣ ಹೇರುವುದಕ್ಕಾಗಿ ಕೇಂದ್ರ ಸರಕಾರ 500, 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡುವುದರ ಜೊತೆಗೆ ಆನ್‌ಲೈನ್ ವಹಿವಾಟಿಗೆ ಒತ್ತು ನೀಡಿತ್ತು. ನಗದುರಹಿತ ಆರ್ಥಿಕತೆಯ ಮೂಲಕ ಪಾರದರ್ಶಕ ವಹಿವಾಟಿಗೆ ಆದ್ಯತೆ ನೀಡುವುದು ಸರಕಾರದ ಉದ್ದೇಶವಾಗಿತ್ತು. ಆದರೆ, ಈ ಕ್ರಮದ ಬಳಿಕ ಸೈಬರ್ ವಂಚನೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಹಾಲಿ ವರ್ಷದಲ್ಲಿ ಇದುವರೆಗೆ (6 ತಿಂಗಳ ಅವಧಿಯಲ್ಲಿ) 27 ಸಾವಿರ ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯೇ ಈ ಬಗ್ಗೆ ಮಾಹಿತಿ ನೀಡಿದೆ. 2016ರ ಇಡೀ ವರ್ಷದಲ್ಲಿ ದಾಖಲಾದದ್ದು ಒಟ್ಟು 50,362 ಪ್ರಕರಣಗಳು. ಹಾಲಿ ವರ್ಷದ ದಾಖಲೆಗಳನ್ನು ನೋಡಿದರೆ ಶೇ.10ರಷ್ಟು ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. 2016ರ ಅಕ್ಟೋಬರ್‌ನಲ್ಲಿ 71.27 ಕೋಟಿ ರೂ. ಡಿಜಿಟಲ್ ಮಾಧ್ಯಮದಲ್ಲಿ ಇದ್ದ ವಹಿ ವಾಟು ಮೊತ್ತ, ನಂತರದ ತಿಂಗಳುಗ ಳಲ್ಲಿ 123.5 ಕೋಟಿ ರೂ.ಗಳಿಗೆ ಹೆಚ್ಚಿತ್ತು.
ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿರುವ ಅಧ್ಯಯನ ಪ್ರಕಾರ, ಕೇಂದ್ರ ಸರಕಾರದ್ದೇ ಆಗಿರುವ ಭೀಮ್ ಆ್ಯಪ್, ಖಾಸಗಿ ರಂಗದ ಪೇಟಿಎಂ ಮತ್ತು ಇತರ ಡಿಜಿಟಲ್ ಪಾವತಿ ಮಾಧ್ಯಮಗಳು ನೋಟು ಅಮಾನ್ಯದ ಬಳಿಕ ಜನಪ್ರಿಯವಾದವು. ಅವು ಸುರಕ್ಷಿತ ಅಲ್ಲವೆಂದು ಪ್ರತಿಪಾದಿಸಿದೆ.
ಮೊಬೈಲ್‌ನಿಂದ ಹಣ ಕದಿಯುವ ಹೊಸ ವೈರಸ್ ಕ್ಸೆಫೆ ಕಾಪಿ ಟ್ರೋಜನ್
ಹುಷಾರ್! ಮೊಬೈಲ್‌ಗೆ ಯಾವುದೇ ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ. ಏಕೆಂದರೆ ಕೆಲವೊಂದು ಆ್ಯಪ್‌ಗ್ಳ ಮೂಲಕ ಕ್ಸೆಫೆ ಕಾಪಿ ಟ್ರೋಜನ್ ಎಂಬ ವೈರಸ್ ಪ್ರವೇಶ ಮಾಡುವ ಸಾಧ್ಯತೆ ಇದೆ. ಅದು ಮೊಬೈಲ್ ಬಿಲ್ಲಿಂಗ್ ಪಾವತಿ ವ್ಯವಸ್ಥೆ ವೈರ್‌ಲೆಸ್ ಅಪ್ಲಿಕೇಶನ್ ಪ್ರೊಟೊಕಾಲ್ (ಡಬ್ಲೂéಎಪಿ) ಮೂಲಕ ಮೊಬೈಲ್ ಗ್ರಾಹಕರ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಪಡೆಯಲಿದೆ. ಈ ಮೂಲಕ ಅದು ಅವರ ಹಣಕ್ಕೆ ಕನ್ನ ಹಾಕಲಿದೆ.
ಪಾವತಿ ಸಂದರ್ಭದಲ್ಲಿ ವೆಬ್‌ಪುಟದಲ್ಲಿ ಬರುವ ಕ್ಯಾಪಾc ಮೂಲಕ ತನ್ನಷ್ಟಕ್ಕೆ ತಾನೇ ರಿಜಿಸ್ಟರ್ ಮಾಡಿಕೊಂಡು ಬಳಕೆದಾರನೇ ಮಾಡಿದಂತೆ ಮಾಡುತ್ತದೆ. ದೇಶದಲ್ಲಿ ಅದರ ಟಾರ್ಗೆಟ್ ಶೇ.40ರಷ್ಟು ಆಗಿದೆ ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ಕಾಸ್ಪರ್‌ಸ್ಪೈ ತನ್ನ ವರದಿಯಲ್ಲಿ ಹೇಳಿಕೊಂಡಿದೆ. 47 ದೇಶಗಳಲ್ಲಿ 4,800ಕ್ಕೂ ಅಧಿಕ ಬಳಕೆದಾರರಿಗೆ ಅದು ಸಮಸ್ಯೆ ತಂದೊಡ್ಡಿದೆ.