Advertisement

Cyber Crime: ಅನಾಮಧೇಯ ಗ್ರೂಪ್‌, ಅಪರಿಚಿತ ಕರೆ…ವಂಚನೆ !

11:15 PM Jan 14, 2025 | Team Udayavani |

ಬಹುತೇಕ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಮೊದಲ ಸನ್ನಿವೇಶ ಇದೇ ರೀತಿ. ಅಂದರೆ ಯಾರಧ್ದೋ ಪುಕ್ಕಟೆ ಸಲಹೆ ನಮ್ಮ ಬಗ್ಗೆ, ನಮ್ಮ ಆರೋಗ್ಯದ ಬಗ್ಗೆಯೂ. ಯಾರಿಗೂ ಯಾರು ಪರಿಚಿತರಲ್ಲ. ಆದರೆ ಅಪರಿಚಿತರಾಗಿಯೂ ಪರಿಚಿತರಂತೆ ಮಾತನಾಡುತ್ತಾರೆ. ಆದರೆ ವಾಟ್ಸಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಲಿಂಕ್‌ಗಳನ್ನು ಒತ್ತಿದರೆ ನಾವು ಸೈಬರ್‌ ವಂಚನೆಯ ಕೋಣೆಯೊಳಗೆ ಪ್ರವೇಶಿಸಿದಂತೆ. ಎಚ್ಚರ !

Advertisement

ಉಡುಪಿ: ನಿತ್ಯವೂ ಸೈಬರ್‌ ವಂಚಕರ ಗಾಳಕ್ಕೆ ಬೀಳುವವರು ಇದ್ದಾರೆ. ಬ್ಯಾಂಕ್‌ ಮ್ಯಾನೇಜರ್‌ ಒಬ್ಬರು ಹಂತ ಹಂತವಾಗಿ ಲಕ್ಷಾಂತರ ರೂ, ಕಳೆದುಕೊಳ್ಳುತ್ತಾರೆ, ಮತ್ತೂಬ್ಬರು ಮಹಿಳೆಯೊಬ್ಬರು ಡಿಜಿಟಲ್‌ ಅರೆಸ್ಟ್‌ ನಲ್ಲಿ ಸಿಲುಕುತ್ತಾರೆ, ಮತ್ತೂಬ್ಬ ವಿದ್ಯಾರ್ಥಿ ಮತ್ಯಾವುದೋ ಸಂಕಟದಲ್ಲಿ ಸಿಲುಕುತ್ತಾನೆ. ಇಂಥ ಕೆಲವು ಪ್ರಸಂಗಗಳನ್ನು ಇಲ್ಲಿ ಕೊಡಲಾಗಿದೆ. ಪ್ರತಿಯೊಬ್ಬರದ್ದೂ ಒಂದೊಂದು ಕಥೆ.

ಮಣಿಪಾಲದ ವಿದ್ಯಾರ್ಥಿಯೊಬ್ಬ 5 ಲಕ್ಷ ರೂ. ಕಳೆದುಕೊಂಡದ್ದು ಹೀಗೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣಗಳಿಸುವ ಕಲೆ ಕರಗತ ಮಾಡಿ ಕೊಂಡಿದ್ದ ಆ ವಿದ್ಯಾರ್ಥಿಗೆ ಅತಿ ಆಸೆ ಉಂಟಾ ಯಿತು. ಮತ್ತಷ್ಟು ಹಣ ಗಳಿಸಲು ನಿರ್ಧರಿಸಿದ. ಅದರಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಇಂಥ ಅವಕಾಶಕ್ಕಾಗಿ ಹುಡುಕಾಡತೊಡಗಿದ. ಒಂದು ದಿನ ಆತನಿಗೆ ಸಿಕ್ಕಿದ್ದೇ ಟೆಲಿಗ್ರಾಂ ಆ್ಯಪ್‌ ನಲ್ಲಿ ಸಿಕ್ಕಿತು ಒಂದು ಲಿಂಕ್‌. ಅದನ್ನು ಬೆನ್ನು ಹತ್ತಿದ. ಬಂದ ಸಂದೇಶಕ್ಕೆ ಇವನು ಉತ್ತರಿಸಿದ. ಪ್ರತಿಯಾಗಿ ಆತನ ವಾಟ್ಸಾಪ್‌ನಲ್ಲಿ ಅನಾಮಧೇಯ ಗ್ರೂಪ್‌ ಒಂದು ಸೃಷ್ಟಿಯಾಯಿತು.

ಅನಾಮಧೇಯ ಗ್ರೂಪ್‌!
ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಮತ್ತಷ್ಟು ಹಣ ಗಳಿಸಬಹುದು ಎಂಬ ಬಗ್ಗೆ ಅದರಲ್ಲಿ ಹಲವು ರೀತಿಯ ಸಂದೇಶಗಳು ಬರುತ್ತಿತ್ತು. ವಾರಗಳ ಕಾಲ ಈ ಬಗ್ಗೆ ಪರಿಶೀಲನೆ ನಡೆಸಿದ ಆತ. ಸಣ್ಣಮಟ್ಟದಿಂದ ಹಣ ಹೂಡಿಕೆ ಮಾಡಲು ಆರಂಭಿಸಿದ. ಆದರೆ ಅಚ್ಚರಿ ಕಾದಿತ್ತು. 5 ಸಾವಿರ ರೂ.ಹೂಡಿಕೆ ಮಾಡಿದರೆ 10 ಸಾವಿರ ರೂ.ಲಾಭ. ದುಪ್ಪಟ್ಟು ಹಣ ಕಂಡು ಮತ್ತಷ್ಟು ಹಣಗಳಿಸಲು ಲೆಕ್ಕಾಚಾರ ಹಾಕಿಕೊಂಡ. 10 ಸಾವಿರ ರೂ.ಹೂಡಿಕೆ ಮಾಡಿದ. 20 ಸಾವಿರ ರೂ.ಬಂತು. ಹಣ ಪಡೆದು(ವಿಥ್‌ಡ್ರಾ) ಕೊಂಡ. ಖುಷಿಯಾಯಿತು.

ಗೌಪ್ಯ ಮಾಹಿತಿ
ಹಣ ದುಪ್ಪಟ್ಟುಗೊಳ್ಳುತ್ತಿರುವ ಈ ತಂತ್ರಗಾರಿಕೆಯನ್ನು ಆತ ಯಾರೊಂದಿಗೂ ಹೇಳಿರಲಿಲ್ಲ. ಸಾವಿರದಿಂದ ಲಕ್ಷಕ್ಕೆ ಹೂಡಿಕೆ ಮಾಡಲು ಆರಂಭಿಸಿದ. ಈ ಸಂದರ್ಭದಲ್ಲಿ ಆತ ಮಾಡಿದ ತಪ್ಪೆಂದರೆ ಹಣವನ್ನು ವಿಥ್‌ ಡ್ರಾ ಮಾಡದಿರುವುದು. ಪ್ರಮಾಣ ಕಡಿಮೆಯಾಗಿ ಲಾಭಾಂಶ ಉತ್ತಮವಾಗಿಯೇ ಬರುತ್ತಿತ್ತು. ಆ ಹಣವನ್ನು ಅದರಲ್ಲಿಯೇ ಇರಿಸಿಕೊಂಡಿದ್ದ. 1 ರಿಂದ 5 ಲ.ರೂ.ಗಳವರೆಗೂ ಹೂಡಿಕೆ ಮಾಡಿದ ಆತನಿಗೆ ಹಣದ ಅನಿವಾರ್ಯತೆ ಎದುರಾಯಿತು.

Advertisement

ಹಣ ತೆಗೆಯಲು ಸಮಸ್ಯೆ
ಈ ವೇಳೆ ತನ್ನ ಖಾತೆಯಲ್ಲಿ ಹಣವಿದ್ದು, ಅದನ್ನು ಹಿಂಪಡೆಯಲು ಯತ್ನಿಸಿದರೆ ಅದು ಸಾಧ್ಯವಾಗಲೇ ಇಲ್ಲ. ಆಗಲೇ ಆತನಿಗೆ ಮತ್ತೂಂದು ಆಘಾತ ಎದುರಾಯಿತು. ಆ ಷೇರು ಮಾರುಕಟ್ಟೆಯ ಆ್ಯಪ್‌ ಕೂಡ ಕಾರ್ಯ ನಿರ್ವಹಿಸಲಿಲ್ಲ.

ಈ ಬಗ್ಗೆ ವಿಚಾರಿಸೋಣ ಎಂದು ವಾಟ್ಸಾಪ್‌ ಗ್ರೂಪ್‌ನಲ್ಲಿದ್ದ ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡಿದರೆ ಯಾವ ಪ್ರತಿಕ್ರಿಯೆ ಯೂ ಇರಲಿಲ್ಲ. ಸುಮಾರು 20ಕ್ಕಿಂತ ಅಧಿಕ ಮೊಬೈಲ್‌ ಸಂಖ್ಯೆ ಆ ಗ್ರೂಪ್‌ನಲ್ಲಿದ್ದು, ಆ ಕ್ಷಣದಿಂದಲೇ ಎಲ್ಲರೂ ಮಾಯವಾಗಿತ್ತು. ತಾನು ಮೋಸ ಹೋಗಿದ್ದೇನೆ ಎಂಬುವುದನ್ನು ಅರಿತ ಆತ ನೇರವಾಗಿ ಬಂದಿದ್ದು, ಉಡುಪಿಯ ಸೆನ್‌ ಪೊಲೀಸ್‌ ಠಾಣೆಗೆ.

ಇಂಥ ಘಟನೆಗಳು ಮೊದಲಲ್ಲ
ಇಂತಹ ಆಮಿಷದ ವಂಚನೆಗಳು ಇದುವೇ ಮೊದಲಲ್ಲ. ಆದರೆ ತಂತ್ರಗಾರಿಕೆ ಮಾತ್ರ ವಿಭಿನ್ನ. ಕೆಲವೊಂದು ಆ್ಯಪ್‌ಗ್ಳಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸೀಮಿತ ಅವಕಾಶ ಇರಿಡಿ, ಗ್ರಾಹಕರಲ್ಲಿ ನಂಬಿಕೆ ಹುಟ್ಟಿಸಲಾಗುತ್ತದೆ. ಯಾವಾಗ ಬೇಕಾದರೂ ಬದಲಾಗಬಹುದು. ಇನ್ನು ಕೆಲವು ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚುವರಿ ಮೊತ್ತ ಸೇರ್ಪಡೆಯಾದ ಬಗ್ಗೆ ನಮ್ಮ ಖಾತೆಯಲ್ಲಿ ತೋರಿಸಿದರೂ ಅದನ್ನು ಹಿಂಪಡೆಯಲಾಗದು. ಇಂಥ ವಂಚಕರಿಂದ ದೂರ ಇರುವುದೇ ಉತ್ತಮ. ಇಂತಹ ಘಟನೆಗಳು ಪೊಲೀಸರ ಗೋಲ್ಡನ್‌ ಹವರ್‌ ಅನ್ನೂ ಮೀರಿಸುತ್ತಿದ್ದು, ಇದನ್ನು ಅಕೌಂಟ್‌ಗಳ ಪರಿಶೀಲನೆಯ ಮೂಲಕವೇ ಪತ್ತೆಹಚ್ಚಬೇಕಾದಂತಹ ಸಂದಿಗ್ಧ ಸ್ಥಿತಿ ಪೊಲೀಸರದ್ದು.

ವಂಚಕರ ಪಾಲಾಗಿದ್ದು ಸಾವಿರಾರು ಕೋಟಿ
ರಾಜ್ಯದಲ್ಲಿ 2 ವರ್ಷದಲ್ಲಿ 43,069 ಪ್ರಕರಣ ಸೈಬರ್‌ ಕ್ರೈಂ ಅಡಿಯಲ್ಲಿ ದಾಖಲಾಗಿದೆ. 2023ರಲ್ಲಿ 22194 ಪ್ರಕರಣ ದಾಖಲಾಗಿ 8,62,71,18,961 ರೂ. ಹಾಗೂ 2024ರಲ್ಲಿ ದಾಖಲಾದ 20875 ಪ್ರಕರಣದಲ್ಲಿ 20,47,22,33,754 ರೂ. ವಂಚಕರ ಪಾಲಾಗಿದೆ. ಅದರಲ್ಲಿ ಇವುಗಳಲ್ಲಿ ಕೇವಲ 2,484 ಪ್ರಕರಣಗಳನ್ನು ಮಾತ್ರ ಪೊಲೀಸರಿಗೆ ತನಿಖೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗಿದೆ. 14,857 ಪ್ರಕರಣಗಳಲ್ಲಿ ಈವರೆಗೂ ಆರೋಪಿಗಳು ಯಾರು ಎಲ್ಲಿಂದ ಚಲನ ವಲನ ನಡೆಸಿದ್ದಾರೆ ಎಂಬುದನ್ನೇ ಕಂಡು ಹಿಡಿಯಲು ಸಾಧ್ಯವಾಗಿಲ್ಲ. 22,938 ಪ್ರಕರಣಗಳು ತನಿಖಾ ಹಂತದಲ್ಲಿವೆ. 2032 ಪ್ರಕರಣ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದೆ. ಅಂದರೆ ಸೈಬರ್‌ ಕ್ರೈಮ್‌ಗಳಲ್ಲಿ ಪತ್ತೆ ಆಗುವುದೇ ಬಹಳ ಕಡಿಮೆ ಎಂಬುದು ಇದರಿಂದ ತಿಳಿದು ಬರುತ್ತದೆ.

2024ರಲ್ಲಿ 11333 ಕೋಟಿ ಸೈಬರ್‌ ವಂಚನೆ
ಕೇಂದ್ರ ಸರಕಾರದ ಭಾರತೀಯ ಸೈಬರ್‌ ಕ್ರೈಮ್‌ ಕೋಆರ್ಡಿನೇಶನ್‌ ಸೆಂಟ್‌ ಪ್ರಕಾರ 2024ರ ಸೆಪ್ಟೆಂಬರ್‌ ಅಂತ್ಯಕ್ಕೆ 11333 ಕೋ.ರೂ. ದೇಶಾದ್ಯಂತ ಸೈಬರ್‌ ವಂಚನೆಯಿಂದ ಜನರು ಕಳೆದು ಕೊಂಡಿದ್ದಾರೆ.

ಇದರಲ್ಲಿ 1,616 ಕೋಟಿ ರೂ. ಡಿಜಿಟಲ್‌ ಅರೆಸ್ಟ್‌ ಮೂಲಕ, 3216 ಕೋ.ರೂ. ಇನ್ವೆಸ್ಟಮೆಂಟ್‌ ಕುರಿತಾದ ವಂಚನೆ ಮತ್ತು ಉಳದಿ 4636 ಕೋ.ರೂ. ಇನ್ನಿತರ ಸೈಬರ್‌ ಕ್ರೈಮ್‌ ವಂಚನೆಗೆ ಸಂಬಂಧಿಸಿದ್ದಾಗಿದೆ.

43 ಸೆನ್‌ ಪೊಲೀಸ್‌ ಠಾಣೆ
ಸೈಬರ್‌ಕ್ರೈಮ್‌ ಪ್ರಕರಣಗಳು ಹೆಚ್ಚಾಗು ತ್ತಿದ್ದಂತೆ ರಾಜ್ಯದ 43 ಕಡೆಗಳಲ್ಲಿ ಸೆನ್‌ ಪೊಲೀಸ್‌ ಠಾಣೆ ತೆರೆಯಲಾಗಿದೆ. ಸೈಬರ್‌ ವಂಚನೆಗೆ ಒಳಗಾದವರಿಗೆ ದೂರು ನೀಡಲು ಅನುಕೂಲ ಆಗುವಂತೆ ಜಿಲ್ಲಾ ಕೇಂದ್ರ ಹಾಗೂ ನಗರ ಕೇಂದ್ರೀತವಾಗಿ ಸೆನ್‌ಠಾಣೆಯನ್ನು 2017ರಲ್ಲಿ ಆರಂಭಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 2, ಉಡುಪಿಯಲ್ಲಿ ಒಂದು ಸೆನ್‌ ಠಾಣೆಯಿದೆ. 2024ರಲ್ಲಿ ಉಡುಪಿಯಲ್ಲಿ 215 ಹಾಗೂ ದ.ಕದಲ್ಲಿ 247 ಪ್ರಕರಣ ದಾಖಲಾಗಿದೆ.ವಂಚನೆಗೆ ಸಂಬಂಧಿಸಿದ್ದಾಗಿದೆ.

ಸೈಬರ್‌ ಕ್ರೈಮ್‌ಗೆ ಕಾರಣಗಳು
-ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿ ಅತಿಯಾದ ಹಂಚಿಕೆ
-ಒಟಿಪಿ, ಬ್ಯಾಂಕ್‌ ಪಾಸ್‌ವರ್ಡ್‌ಗಳನ್ನು ಅನಾಮಧೇಯ ವ್ಯಕ್ತಿಗೆ ನೀಡುವುದು
-ಅನಗತ್ಯ ಲಿಂಕ್‌ ಕ್ಲಿಕ್‌ ಮಾಡುವುದು
-ಸಾಫ್ಟ್ವೇರ್‌ ಮತ್ತು ಆ್ಯಪ್‌ ಅಪ್‌ಡೇಟ್‌ ಮಾಡದಿರುವುದು
– ಮೊಬೈಲ್‌ಗೆ ಅನಗತ್ಯ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು
-ಸಾರ್ವಜನಿಕ ವೈ-ಫೈ ಬಳಿಕೆ ಸಮಯದಲ್ಲಿ ಎಚ್ಚರಿಕೆ ವಹಿಸದೇ ಇರುವುದು
-ಆಮಿಷ ಹಾಗೂ ಭಯ ಹುಟ್ಟಿಸುವ ಇ-ಮೇಲ್‌, ಕಾಲ್‌ಗ‌ಳನ್ನು ಕಡೆಗಣಿಸದೇ ಗಂಭೀರವಾಗಿ ಪರಿಗಣಿಸುವುದು
-ಮಕ್ಕಳ ಆನ್‌ಲೈನ್‌ ಚಟುವಟಿಕೆ ಪರಿಶೀಲಿಸದೇ ಇರುವುದು
-ಹಣ ದುಪ್ಪಟ್ಟು ಹೂಡಿಕೆಗೆ ಮರಳಾಗುವುದು

Advertisement

Udayavani is now on Telegram. Click here to join our channel and stay updated with the latest news.