Advertisement
ಮಂಗಳೂರು ನಗರ ಮತ್ತು ಹೊರ ವಲಯದ ಒಟ್ಟು 3 ಎಟಿಎಂಗಳಲ್ಲಿ “ಸ್ಕಿಮ್ಮಿಂಗ್’ ನಡೆಸಿ ಎಟಿಎಂ ಬಳಕೆದಾರರ ಖಾತೆಗಳಿಂದ ಹಣ ವಿದ್‌ಡ್ರಾ ಮಾಡಿರುವ ಘಟನೆ ಈಚೆಗೆ ಸಂಭವಿಸಿದೆ. ಉಡುಪಿ ಭಾಗದಲ್ಲೂ ಇಂಥ ಪ್ರಕರಣ ವರದಿಯಾಗಿವೆ.
ಈ ಕೃತ್ಯಗಳು ನಡೆದಿರುವ ಎಟಿಎಂಗಳೆಲ್ಲ ಹಳೆಯ ಮಾದರಿಯವು ಎಂದು ತಿಳಿದು ಬಂದಿದೆ. ಈ ಎಟಿಎಂ ಗಳಲ್ಲಿ ಸ್ಕಿಮ್ಮಿಂಗ್ ಉಪಕರಣವನ್ನು ಜೋಡಿಸಲು ವಂಚಕರಿಗೆ ಸಾಧ್ಯವಾಗುತ್ತದೆ. ಈ ಎಟಿಎಂಗಳಲ್ಲಿ ಭದ್ರತ ಸಿಬಂದಿಯೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ಎನ್‌ಸಿಆರ್ ಎಟಿಎಂಗಳು, ಅಂದರೆ ಕಾರ್ಡ್ ಸ್ವೆಪ್ ಮಾಡಬಹುದಾದ ಯಂತ್ರಗಳು ಸುರಕ್ಷಿತವಲ್ಲ.
Advertisement
ಬ್ಯಾಂಕ್‌ನವರೇನು ಮಾಡಬಹುದು? ಬ್ಯಾಂಕ್‌ಗಳು ಎಟಿಎಂ ಬಳಕೆದಾರ ರಿಗೆ ಗರಿಷ್ಠ ಸುರಕ್ಷತೆ ಒದಗಿಸುವ ಆವಶ್ಯಕತೆ ಎದುರಾಗಿದೆ.
– ಸ್ಕಿಮ್ಮಿಂಗ್ ಸಾಧ್ಯವಾಗದ ಹೊಸ ಮಾದರಿಯ ಎಟಿಎಂ ಅಳವಡಿಸಬೇಕು.
– ಎಟಿಎಂಗಳಲ್ಲಿ ದಿನದ 24 ತಾಸು ಭದ್ರತ ಸಿಬಂದಿ ಇರಬೇಕು.
– ಸಿಸಿ ಕೆಮರಾ ಅಳವಡಿಸಿ ನಿರಂತರ ನಿರ್ವಹಿಸುತ್ತಿರಬೇಕು.
– ಎಟಿಎಂ ಬಳಕೆ, ಸುರಕ್ಷೆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು.
– ದೂರು ನೀಡಲು ಬರುವ ಗ್ರಾಹಕರಿಗೆ ತುರ್ತಾಗಿ ಸ್ಪಂದಿಸಬೇಕು, ಅಗತ್ಯ ದಾಖಲೆ (ಸ್ಟೇಟ್‌ಮೆಂಟ್) ನೀಡಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹಕರಿಸಬೇಕು. ಗ್ರಾಹಕರೇನು ಮಾಡಬೇಕು?
– ಎಟಿಎಂನಲ್ಲಿ ಅನುಮಾಸ್ಪಾದವಾದ ಉಪಕರಣ ಜೋಡಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
– ಅನುಮಾನ ಬಂದರೆ ಅಲ್ಲಿ ಕಾರ್ಡ್ ಬಳಕೆ ಮಾಡದೆ ಕೂಡಲೇ ಹತ್ತಿರದ ಬ್ಯಾಂಕ್ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು.
– ಸ್ಕಿಮ್ಮಿಂಗ್ ಅನುಮಾನ ಬಂದರೆ ಎಟಿಎಂ ಕಾರ್ಡ್ ಬ್ಲಾಕ್ ಮಾಡಬೇಕು.