ಸಿಯೋಲ್: ಅಂತರ್ಜಾಲ ತಾಣದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಖ್ಯಾತ ಕೊರಿಯನ್ ಪಾಪ್ ಸ್ಟಾರ್ ಸೋಮವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.
ಕೊರಿಯಾದ ಪಾಪ್ ಸ್ಟಾರ್ ಸುಲ್ಲಿ (25)ಯ ಶವ ಮನೆಯಲ್ಲಿ ಪತ್ತೆಯಾಗಿರುವುದಾಗಿ ಆಕೆಯ ಮ್ಯಾನೇಜರ್ ತಿಳಿಸಿರುವುದಾಗಿ ವರದಿ ಹೇಳಿದೆ. 25ರ ಹರೆಯದ ಪಾಪ್ ಸ್ಟಾರ್ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಿರುವುದಾಗಿ ದಕ್ಷಿಣ ಕೊರಿಯಾ ಪೊಲೀಸರು ತಿಳಿಸಿದ್ದಾರೆ.
ಟೀಕೆಗೆ ಕಾರಣವೇನು?
ಕೆ-ಪಾಪ್ ಸ್ಟಾರ್ ಸುಲ್ಲಿ ಇನ್ಸ್ ಸ್ಟಾಗ್ರಾಮ್ ನಲ್ಲಿ ಸ್ತನ ಪ್ರದರ್ಶಿಸಿದ್ದು, ಅಂತರ್ಜಾಲದಲ್ಲಿ ಭಾರೀ ಟೀಕೆಗೆ ಒಳಗಾಗುವಂತೆ ಮಾಡಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಸುಲ್ಲಿ ಪದೇ, ಪದೇ ಸ್ತನ ಪ್ರದರ್ಶಿಸಿದ್ದು, ಆಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರಿಂದಾಗಿ ಖ್ಯಾತ ಪಾಪ್ ಸಂಗೀತಗಾರ್ತಿ ಸುಲ್ಲಿಯನ್ನು ಅಮಾನತು ಮಾಡಲಾಗಿತ್ತು. ಸುಲ್ಲಿಯ ನಿಜವಾದ ಹೆಸರು ಚೋಯಿ ಜಿನ್ ರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಸುಲ್ಲಿ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.