ಬರ್ಮಿಂಗಂ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಭಾರತದ ಎಲ್ದೋಸ್ ಪೌಲ್ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ.
ಇದು ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿ ಇದುವರೆಗಿನ ಆರನೇ ಅಥ್ಲೆಟಿಕ್ಸ್ ಚಿನ್ನವಾಗಿದೆ. ಭಾರತದ ಮತ್ತೋರ್ವ ಆಟಗಾರ ಅಬ್ದುಲ್ಲಾ ಅಬೂಬಕರ್ ಬೆಳ್ಳಿಯ ಪದಕ ಗೆದ್ದರು. ಈ ಮೂಲಕ ಚಿನ್ನ – ಬೆಳ್ಳಿ ಎರಡೂ ಭಾರತದ ಪಾಲಾಯಿತು.
ಅಬೂಬಕರ್ ಅವರು ತಮ್ಮ ಐದನೇ ಪ್ರಯತ್ನದಲ್ಲಿ 17.02 ಮೀ ಜಿಗಿತದೊಂದಿಗೆ ಬೆಳ್ಳಿ ಗೆದ್ದರು. ಬರ್ಮುಡಾದ ಜಾಹ್-ನ್ಹೈ ಪೆರಿಂಚಿಫ್ 16.92 ಮೀ ಜಿಗಿತದೊಂದಿಗೆ ಕಂಚು ಗೆದ್ದರು.
ಇದನ್ನೂ ಓದಿ:ಚಿನ್ನದ ಪಂಚ್: ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಜಯಿಸಿದ ಅಮಿತ್ ಪಂಗಾಲ್, ನೀತು ಘಂಘಾಸ್
ಮತ್ತೋರ್ವ ಭಾರತೀಯ ಪ್ರವೀಣ್ ಚಿತ್ರವೆಲ್ ನಾಲ್ಕನೇ ಸ್ಥಾನ ಪಡೆದರು. ಅವರು 0.03 ಮೀ. ಅಂತರದಲ್ಲಿ ಅವರು ಕಂಚಿನ ಪದಕದಿಂದ ವಂಚಿತರಾದರು. ಅವರು ಅಂತಿಮವಾಗಿ 16.89 ಮೀಟರ್‌ಗಳ ಅತ್ಯುತ್ತಮ ಜಿಗಿತದೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಎಲ್ಡೋಸ್ ಪೌಲ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ 17ಮೀಟರ್ ಮಾರ್ಕ್ ದಾಟಿದ ಮೊದಲ ಆಟಗಾರನಾದರು. ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 17.03 ಮೀ ಜಂಪ್ ಮಾಡಿದರು.