Advertisement

ಜೂಡೊ: ಚಿನ್ನದ ಸುತ್ತಿನಲ್ಲಿ ತೂಲಿಕಾ ಮಾನ್‌

10:36 PM Aug 03, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಜೂಡೋದಲ್ಲಿ ಭಾರತಕ್ಕೆ ಮೂರನೇ ಪದಕ ಇನ್ನೇನು ಕೈಗೆಟುಕುವ ದೂರದಲ್ಲಿದೆ. ವನಿತೆಯರ 78 ಕೆಜಿ ವಿಭಾಗದಲ್ಲಿ ತೂಲಿಕಾ ಮಾನ್‌ ಫೈನಲ್‌ ತಲುಪಿದ್ದು, ಚಿನ್ನದ ಪದಕದ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.

Advertisement

ಬುಧವಾರ ತಡರಾತ್ರಿ ಫೈನಲ್‌ ನಡೆಯಲಿದೆ. ಸೆಮಿಫೈನಲ್‌ ಸೆಣಸಾಟದಲ್ಲಿ ತೂಲಿಕಾ ಮಾನ್‌ ನ್ಯೂಜಿಲ್ಯಾಂಡ್‌ನ‌ ಸಿಡ್ನಿ ಆ್ಯಂಡ್ರೂéಸ್‌ ಅವರನ್ನು ಮೂರೇ ನಿಮಿಷ ದಲ್ಲಿ ನೆಲಕ್ಕೆ ಮಗುಚಿದರು. ಇವರ ಫೈನಲ್‌ ಎದುರಾಳಿ ಸ್ಕಾಟ್ಲೆಂಡ್‌ನ‌ ಸಾರಾ ಅಡ್ಲಿಂಗ್ಟನ್‌.

ದಿನದ ಇನ್ನೊಂದು ಸ್ಪರ್ಧೆಯಲ್ಲಿ ಪುರುಷರ 100 ಕೆಜಿ ವಿಭಾಗದಲ್ಲಿ ದೀಪಕ್‌ ದೇಸ್ವಾಲ್‌ ರೆಪಿಶೇಜ್‌ ಸುತ್ತಿನಲ್ಲಿ ಫಿಜಿಯ ಟೆವಿಟ ಟಕವಾಯ ವಿರುದ್ಧ ಪರಾಭವಗೊಂಡರು.

ಜೂಡೋದಲ್ಲಿ ಈ ವರೆಗೆ ಎಲ್‌. ಸುಶೀಲಾದೇವಿ ಬೆಳ್ಳಿ (ವನಿತೆಯರ 48 ಕೆಜಿ ವಿಭಾಗ) ಮತ್ತು ವಿಜಯ್‌ ಕುಮಾರ್‌ (ಪುರುಷರ 60 ಕೆಜಿ ವಿಭಾಗ) ಕಂಚಿನ ಪದಕ ಜಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next