Advertisement

ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌: ಭಾರತದ ಯೋಗೇಶ್ವರ್‌ ಸಿಂಗ್‌ಗೆ 15ನೇ ಸ್ಥಾನ

11:26 PM Jul 31, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಪುರುಷರ ಆಲ್‌ರೌಂಡ್‌ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ ಫೈನಲ್‌ನಲ್ಲಿ ಭಾರತದ ಯೋಗೇಶ್ವರ್‌ ಸಿಂಗ್‌ 15ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಅವರು ಈ ವಿಭಾಗದ ಫೈನಲ್‌ಗೆ ಆಯ್ಕೆಯಾಗಿದ್ದ ಭಾರತದ ಏಕೈಕ ಜಿಮ್ನಾಸ್ಟ್‌ ಆಗಿದ್ದರು. ಸೈಫ್ ತಂಬೋಲಿ ಮತ್ತು ಸತ್ಯಜಿತ್‌ ಮೊಂಡಲ್‌ ಅವರಿಗೆ ಸ್ವಲ್ಪದರಲ್ಲೇ ಅವಕಾಶ ತಪ್ಪಿತ್ತು.

Advertisement

ಹರ್ಯಾಣದವರಾದ, 3 ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಯೋಗೇಶ್ವರ್‌ ಸಿಂಗ್‌ ಒಟ್ಟು 74.700 ಅಂಕ ಗಳಿಸಿದರು. ಇಂಗ್ಲೆಂಡ್‌ ಮೂರೂ ಪದಕಗಳನ್ನು ಬಾಚಿಕೊಂಡಿತು. ಜಾಕ್‌ ಜರ್ಮನ್‌ ಚಿನ್ನ (83.450), ಜೇಮ್ಸ್‌ ಹಾಲ್‌ ಬೆಳ್ಳಿ (82.900) ಮತ್ತು ಮಾರಿಯಸ್‌ ಜಾರ್ಜಿಯೊ ಕಂಚು ಗೆದ್ದರು (81.750).

 

 

Advertisement

Udayavani is now on Telegram. Click here to join our channel and stay updated with the latest news.

Next