Advertisement

ಟೇಬಲ್‌ ಟೆನಿಸ್‌: ಭಾರತಕ್ಕೆ 3-0 ಹ್ಯಾಟ್ರಿಕ್‌

11:50 PM Jul 30, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ಟೇಬಲ್‌ ಟೆನಿಸ್‌ ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ.

Advertisement

ಶುಕ್ರವಾರ ದಕ್ಷಿಣ ಆಫ್ರಿಕಾ ಮತ್ತು ಫಿಜಿ ವಿರುದ್ಧ 3-0 ಮೇಲುಗೈ ಸಾಧಿಸಿದ್ದ ಹಾಲಿ ಚಾಂಪಿಯನ್‌ ಭಾರತ, ಶನಿವಾರ ಗಯಾನಾವನ್ನು ಇಷ್ಟೇ ಅಂತರದಿಂದ ಮಣಿಸಿ ಹ್ಯಾಟ್ರಿಕ್‌ ಸಾಧಿಸಿತು.

ದಿನದ ಮೊದಲ ಪಂದ್ಯದಲ್ಲಿ ಶ್ರೀಜಾ ಅಕುಲಾ-ರೀತ್‌ ಟೆನ್ನಿಸನ್‌ ಸೇರಿಕೊಂಡು ನಥಾಲಿ ಕಮಿಂಗ್ಸ್‌-ಚೆಲ್ಸಿಯಾ ಎಡ್ಗಿಲ್‌ ಜೋಡಿಯನ್ನು 11-5, 11-7, 11-7ರಿಂದ ಮಣಿಸಿ ಗೆಲುವಿನ ಖಾತೆ ತೆರೆದರು.

ಬಳಿಕ ಮಣಿಕಾ ಬಾತ್ರಾ 11-1, 11-3, 11-13ರಿಂದ ತುರೈಯಾ ಥಾಮಸ್‌ಗೆ ಸೋಲುಣಿಸಿದರು. ವನಿತೆಯರ ಇನ್ನೊಂದು ಸಿಂಗಲ್ಸ್‌ನಲ್ಲಿ ರೀತ್‌ ಟೆನ್ನಿಸನ್‌ ಜಿದ್ದಾಜಿದ್ದಿ ಹೋರಾಟದ ಬಳಿಕ ಚೆಲ್ಸಿಯಾ ಎಡ್ಗಿಲ್‌ ಅವರನ್ನು 11-7, 14-12, 13-11 ಅಂತರದಿಂದ ಮಣಿಸಿದರು.

ಪುರುಷರ ವಿಭಾಗ
ಪುರುಷರ ವಿಭಾಗದಲ್ಲಿ ಭಾರತ 3-0 ಅಂತರದಿಂದ ನಾರ್ದರ್ನ್ ಐರ್ಲೆಂಡ್‌ ವಿರುದ್ಧ 3-0 ಗೆಲುವು ಸಾಧಿಸಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next