Advertisement

ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್

08:14 AM Aug 08, 2022 | Team Udayavani |

ಬರ್ಮಿಂಗ್‌ಹ್ಯಾಮ್‌ : ರವಿವಾರ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಗೆ ಸುರಿದಿದೆ, ಇದರೊಂದಿಗೆ ಪದಕ ಬೇಟೆಯಲ್ಲಿ ಭಾರತ ಅರ್ಧಶತಕದ ಗಡಿ ದಾಟಿದೆ.

Advertisement

ರವಿವಾರ ನಡೆದ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ ಪುರುಷರ 92kg ಫೈನಲ್ ವಿಭಾಗದಲ್ಲಿ ಸೋಲು ಕಂಡರೂ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್​ನ ಡೆಲೀಶಿಯಸ್ ಓರಿಯೊ ವಿರುದ್ಧ 0-5 ಅಂತರದಿಂದ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

ನಿನ್ನ ನಡೆದ 10 ನೇ ದಿನದ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 14 ಪದಕಗಳನ್ನು ತಮ್ಮದಾಗಿಸಿಕೊಂಡಿದೆ. ಕಾಮನ್‌ವೆಲ್ತ್ ಗೇಮ್ಸ್‌ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಭಾರತೀಯ ಅಥ್ಲೀಟ್‌ಗಳು ಒಟ್ಟು 55 ಪದಕ (18 ಚಿನ್ನ, 15 ಬೆಳ್ಳಿ ಮತ್ತು 22 ಕಂಚು)ಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೋದಿಯವರಿಗೆ ರಾಖಿ ಕಳುಹಿಸಿದ ಪಾಕ್ ಸಹೋದರಿ; ಹಾರೈಕೆಯೇನು?

Advertisement

Udayavani is now on Telegram. Click here to join our channel and stay updated with the latest news.

Next