Advertisement

ಕಾಮನ್ ವೆಲ್ತ್ ಗೇಮ್ಸ್ 2022: ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜನ್‌ ಸೆಮಿಗೆ

11:15 PM Jul 29, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಈಜಿನಲ್ಲಿ ಭಾರತದ ಭರವಸೆಯಾಗಿ ಉಳಿದವರು ಶ್ರೀಹರಿ ನಟರಾಜನ್‌. ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾದರು. 54.68 ಸೆಕೆಂಡ್‌ಗಳಲ್ಲಿ ದೂರವನ್ನು ಕ್ರಮಿಸಿದ ಶ್ರೀಹರಿ ಹೀಟ್‌ನಲ್ಲಿ 3ನೇ ಹಾಗೂ ಒಟ್ಟಾರೆ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಸೆಮಿಫೈನಲ್‌ ರಾತ್ರಿ 1.15ಕ್ಕೆ ನಡೆಯಲಿದೆ.

Advertisement

ಕುಶಾಗ್ರ, ಸಾಜನ್‌ ವಿಫ‌ಲ
ಪುರುಷರ 400 ಮೀ. ಫ್ರೀಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಭಾರತದ ಕುಶಾಗ್ರ ರಾವತ್‌ ಫೈನಲ್‌ ಪ್ರವೇಶಿಸಲು ವಿಫ‌ಲರಾದರು. ಹೀಟ್‌-3ರಲ್ಲಿದ್ದ ಅವರು 3:57.45 ಸೆಕೆಂಡ್‌ಗಳೊಂದಿಗೆ 8ನೇ ಸ್ಥಾನ ಪಡೆದರೆ, ಒಟ್ಟಾರೆ 21 ಸ್ಪರ್ಧಿಗಳಲ್ಲಿ 14ನೇ ಸ್ಥಾನಿಯಾದರು.

ಸಾಜನ್‌ ಪ್ರಕಾಶ್‌ 50 ಮೀ. ಬಟರ್‌ಫ್ಲೈ ಹೀಟ್‌ನಲ್ಲಿ 8ನೇ ಸ್ಥಾನಕ್ಕೆ ಕುಸಿದು ಸೆಮಿಫೈನಲ್‌ ಅವಕಾಶವನ್ನು ತಪ್ಪಿಸಿಕೊಂಡರು.

ಸೈಕ್ಲಿಂಗ್‌: ಕೊನೆಯ ಸ್ಥಾನ ಪುರುಷರ 4,000 ಮೀ. ಸೈಕ್ಲಿಂಗ್‌ನಲ್ಲಿ ಭಾರತ ಕೊನೆಯ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next