Advertisement
ಇದೇ ಮೊದಲ ಸಲ ಗೇಮ್ಸ್‌ನಲ್ಲಿ ಪ್ರತಿನಿಧಿಸಿದ, 26 ವರ್ಷದ ಗುರುದೀಪ್ 109 ಪ್ಲಸ್ ಕೆಜಿ ವಿಭಾಗದಲ್ಲಿ ಒಟ್ಟು 390 ಕೆಜಿ (167 ಪ್ಲಸ್ 223 ಕೆಜಿ) ಭಾರವನ್ನೆತ್ತಿ ತೃತೀಯ ಸ್ಥಾನಿಯಾದರು.
Related Articles
Advertisement
ಬರ್ಮಿಂಗ್‌ಹ್ಯಾಮ್: ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಮಂಜು ಬಾಲಾ ಪದಕ ಸುತ್ತು ಪ್ರವೇಶಿಸಿದ್ದಾರೆ. ಆದರೆ ಸರಿತಾ ಸಿಂಗ್ ಈ ಹಂತ ಮುಟ್ಟಲು ವಿಫಲರಾದರು.
33 ವರ್ಷದ ಮಂಜು ಬಾಲಾ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದರು. ಇವರ ಗರಿಷ್ಠ ದೂರ 59.68 ಮೀ. ಆಗಿತ್ತು. ಇದು ಮೊದಲ ಎಸೆತದಲ್ಲೇ ದಾಖಲಾಯಿತು. ಕೆನಡಾದ ಕ್ಯಾಮ್ರಿನ್ ರೋಜರ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನಿಯಾದರು (74.68 ಮೀ.). ಇದು ಗೇಮ್ಸ್ ದಾಖಲೆಯೂ ಆಗಿದೆ.
ಸರಿತಾ ಸಿಂಗ್ 13ನೇ ಸ್ಥಾನಕ್ಕೆ ಕುಸಿದರು. ಇವರೆಸೆದ ಗರಿಷ್ಠ ದೂರ 57.48 ಮೀ. ಆಗಿತ್ತು. ಕಡೇ ಪಕ್ಷ 12ನೇ ಸ್ಥಾನಕ್ಕೆ ಬಂದರೂ ಸರಿತಾಗೆ ಫೈನಲ್ ಪ್ರವೇಶ ಲಭಿಸುತ್ತಿತ್ತು.
ಹ್ಯಾಮರ್ ತ್ರೋ ಫೈನಲ್ ಸ್ಪರ್ಧೆ ಶನಿವಾರ ಸಾಗಲಿದೆ.