Advertisement

ಬ್ಯಾಡ್ಮಿಂಟನ್‌: ಆಸ್ಟ್ರೇಲಿಯವನ್ನು 4-1 ಅಂತರದಿಂದ ಮಣಿದ ಭಾರತ

11:30 PM Jul 31, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಈಗಾಗಲೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಭಾರತದ ಬ್ಯಾಡ್ಮಿಂಟನ್‌ ತಂಡ, “ಎ’ ವಿಭಾಗದ ಅಂತಿಮ ಮುಖಾಮುಖಿಯಲ್ಲಿ ಆಸ್ಟ್ರೇಲಿಯವನ್ನು 4-1 ಅಂತರದಿಂದ ಮಣಿಸಿತು.

Advertisement

ಮೊದಲ ಪಂದ್ಯದಲ್ಲಿ ಕೆ. ಶ್ರೀಕಾಂತ್‌ 21-14, 21-13 ಅಂತರದಿಂದ ಲಿನ್‌ ಕ್ಸಿಯಾಂಗ್‌ ಅವರಿಗೆ ಸೋಲುಣಿಸಿದರು. ಪಿ.ವಿ. ಸಿಂಧು 21-10, 21-12ರಿಂದ ಸುವಾನ್‌ ಯು ಆಟವನ್ನು ಕೊನೆಗೊಳಿಸಿದರು.

ಮೊದಲ ಡಬಲ್ಸ್‌ನಲ್ಲಿ ಜಿದ್ದಾಜಿದ್ದಿ ಸ್ಪರ್ಧೆ ಎದುರಿಸಿದ ಸುಮೀತ್‌ ರೆಡ್ಡಿ-ಚಿರಾಗ್‌ ಶೆಟ್ಟಿ 21-16, 21-19ರಿಂದ ಟ್ರಾನ್‌ ಹಾಂಗ್‌ ಫಾಮ್‌-ಜಾಕ್‌ ಯು ಜೋಡಿ ವಿರುದ್ಧ ಮೇಲುಗೈ ಸಾಧಿಸಿದರು. ಆದರೆ ವನಿತಾ ಡಬಲ್ಸ್‌ನಲ್ಲಿ ತಿೃಷಾ ಜಾಲಿ-ಗಾಯತ್ರಿ ಗೋಪಿಚಂದ್‌ ಜೋಡಿ ಸೋಲು ಕಾಣಬೇಕಾಯಿತು. ಕೊನೆಯಲ್ಲಿ ಸುಮೀತ್‌ ರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಗೆಲುವು ಸಾಧಿಸಿ ಭಾರತಕ್ಕೆ 4-1 ಮುನ್ನಡೆ ಒದಗಿಸಿದರು.

“ಎ’ ವಿಭಾಗದಲ್ಲಿ ಭಾರತ 3 ಗೆಲುವುಗಳೊಂದಿಗೆ ಅಜೇಯವಾಗಿ ಉಳಿದಿದೆ. ಶ್ರೀಲಂಕಾ ದ್ವಿತೀಯ ಸ್ಥಾನಿಯಾಗದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next