Advertisement

ಕಾಮನ್ವೆಲ್ತ್‌ ವೆಬ್‌ಸೈಟ್‌ ಸುಶೀಲ್‌ ಹೆಸರು ಕಾಣೆ, ನಂತರ ಸೇರ್ಪಡೆ

06:00 AM Mar 31, 2018 | Team Udayavani |

ಹೊಸದಿಲ್ಲಿ: ಕಾಮನ್‌ವೆಲ್ತ್‌ ಗೇಮ್ಸ್‌ನ ಸಂಘಟಕರು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಕುಸ್ತಿಯ 74 ಕೆ.ಜಿ. ವಿಭಾಗದ ಸ್ಪರ್ಧಿಗಳ ಪಟ್ಟಿಯಲ್ಲಿ ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತ ಸುಶೀಲ್‌ ಕುಮಾರ್‌ ಹೆಸರು ನೋಂದಣಿಯಾಗಿರಲಿಲ್ಲ. ಇದರಿಂದ ಕೆಲಕಾಲ ಭಾರತೀಯ ಅಧಿಕಾರಿಗಳು ಮತ್ತು ಕ್ರೀಡಾಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಅನಂತರ ವೆಬ್‌ಸೈಟ್‌ನಲ್ಲಿ ಹೆಸರನ್ನು ಸೇರಿಸಲಾಗಿದ್ದು, ಕ್ರೀಡಾಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.

Advertisement

ಪುರುಷರ ಫ್ರೀಸ್ಟೈಲ್‌ 74 ಕೆ.ಜಿ. ಕುಸ್ತಿ ವಿಭಾಗದ ಸ್ಪರ್ಧಿಗಳ ಪಟ್ಟಿಯಲ್ಲಿ ಒಟ್ಟು 15 ಮಂದಿಯ ಹೆಸರನ್ನು ಮಾತ್ರ ಪ್ರಕಟಿಸಲಾಗಿತ್ತು. ಸುಶೀಲ್‌ ಅವರ ಹೆಸರು 16ನೇ ಕ್ರಮಾಂಕದಲ್ಲಿ ಇರಬೇಕಿತ್ತು. ಆದರೆ ಇರಲಿಲ್ಲ. ಅನಂತರ ಅಂತಿಮವಾಗಿ ವೆಬ್‌ಸೈಟ್‌ನಲ್ಲಿ ಸೇರಿಸಲಾಯಿತು. ಇನ್ನುಳಿದದಂತೆ ಪುರುಷರ ಮತ್ತು ಮಹಿಳೆಯರ ಫ್ರೀಸ್ಟೈಲ್‌ ಕುಸ್ತಿ ವಿಭಾಗಗಳಲ್ಲಿ ಭಾರತದ ಒಟ್ಟು 11 ಕುಸ್ತಿಪಟುಗಳು ಭಾಗವಹಿಸುತ್ತಿದ್ದು, ಎಲ್ಲರ ಹೆಸರೂ ಪ್ರಕಟವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next