Advertisement

ತೇಜಸ್ವಿನ್‌ ಶಂಕರ್‌, ಹಿಮಾ ವಿಫ‌ಲ

07:00 AM Apr 12, 2018 | Team Udayavani |

ಗೋಲ್ಡ್‌ಕೋಸ್ಟ್‌: ಬುಧವಾರದ ಆ್ಯತ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಭಾರತ ನಿರಾಸೆ ಅನುಭವಿಸಿತು. ಪುರುಷರ ಹೈಜಂಪ್‌ನಲ್ಲಿ ತೇಜಸ್ವಿನ್‌ ಶಂಕರ್‌ 2.27 ಮೀ. ಎತ್ತರದ ಗುರಿ ತಲುಪಲು ವಿಫ‌ಲರಾದರು; 6ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರು. ಇದು 19ರ ಹರೆಯದ ಹೈಜಂಪರ್‌ ಪಾಲಿನ ಮೊದಲ ಕಾಮನ್ವೆಲ್ತ್‌ ಗೇಮ್ಸ್‌ ಆಗಿತ್ತು.

Advertisement

ವನಿತೆಯರ 400 ಮೀ. ಫೈನಲ್‌ನಲ್ಲಿ ಯುವ ಓಟಗಾರ್ತಿ ಹಿಮಾ ದಾಸ್‌ ಕೂಡ 6ನೇ ಸ್ಥಾನಿಯಾದರು. ಈ ದೂರವನ್ನು ಹಿಮಾ 51.32 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾಗಿತ್ತು. ಆದರೆ ಪದಕ ಗೆಲ್ಲಲು ಈ ಪ್ರಯತ್ನ ಸಾಲಲಿಲ್ಲ. ಸೆಮಿಫೈನಲ್‌ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಹಿಮಾ ಫೈನಲ್‌ಗೆ ಆಯ್ಕೆಯಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next