Advertisement

ಮುಂದಿನ ತಿಂಗಳು ಸಿಡಬ್ಲ್ಯುಸಿ ಚುನಾವಣೆ: ಕಾಂಗ್ರೆಸ್‌

12:44 AM Jan 03, 2023 | Team Udayavani |

ಹೊಸದಿಲ್ಲಿ: ಛತ್ತೀಸಗಢದ ರಾಯ್ಪುರದಲ್ಲಿ ಫೆ.24 ರಿಂದ 26ರವರೆಗೆ ನಡೆಯುವ ಪಕ್ಷದ ಸರ್ವ ಸದಸ್ಯರ ಸಭೆ ವೇಳೆ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

Advertisement

ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದೆ. “ರಾಯ್ಪುರದ ಸರ್ವ ಸದಸ್ಯರ ಸಭೆ ವೇಳೆ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಲಿದೆ.

ಪಕ್ಷದ ಸಂವಿಧಾನದ ಪ್ರಕಾರ ಚುನಾವಣೆ ಕೈಗೊಳ್ಳಲಾಗುವುದು. ಸಭೆಯಲ್ಲಿ ರಾಜಕೀಯ, ಆರ್ಥಿಕತೆ, ಅಂತಾರಾಷ್ಟ್ರೀಯ ವ್ಯವ ಹಾರ, ಕೃಷಿ ಮತ್ತು ರೈತರು, ಸಾಮಾಜಿಕ ನ್ಯಾಯ, ಯುವಜನ ಮತ್ತು ಸಬಲೀಕರಣ, ಶಿಕ್ಷಣ ಮತ್ತು ಉದ್ಯೋಗದ ವಿಷಯದ ಕುರಿತು ಚರ್ಚಿಸಲಾಗು ವುದು,’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next