“ಕಟ್ಟಿಂಗ್ ಶಾಪ್’- ಹೀಗೊಂದು ವಿಭಿನ್ನ ಹೆಸರಿನ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್, ಟ್ರೇಲರ್ ಮೂಲಕ “ಕಟ್ಟಿಂಗ್ ಶಾಪ್’ ಸಿನಿಮಾದಲ್ಲಿ ಸಿನಿಮಾ ಸಂಕಲನಕಾರನೊಬ್ಬನ ಬದುಕು-ಬವಣೆಗಳನ್ನು ತೆರೆಯ ಮೇಲೆ ತೋರಿಸಲಾಗಿದೆ.
“ಸಿಂಪಲ್’ ಸುನಿ ಬಳಿ ಕೆಲವು ಸಿನಿಮಾಗಳಿಗೆ ಕಾರ್ಯ ನಿರ್ವಹಿಸಿರುವ ಪವನ್ ಭಟ್ “ಕಟ್ಟಿಂಗ್ ಶಾಪ್’ ಸಿನಿಮಾ ಮೂಲಕ ನಿರ್ದೇಶಕರಾಗಿ ದ್ದಾರೆ. ಅವರ ಸಹೋದರ ಕೆ.ಬಿ.ಪ್ರವೀಣ್ ಚಿತ್ರದ ಪ್ರಮುಖ ಪಾತ್ರಧಾರಿ. ಪವನ್ ನಿರ್ದೇಶನದ ಜತೆಗೆ ಸಾಹಿತ್ಯ ಹಾಗೂ ಸಂಭಾಷಣೆ ರಚಿಸಿದರೆ, ಪ್ರವೀಣ್ ಬಣ್ಣ ಹಚ್ಚುವುದರ ಜೊತೆ ಜೊತೆಗೆ ಸಂಗೀತ ಮತ್ತು ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪವನ್ ಭಟ್, “ಇದು ಎಲ್ಲರಿಗೂ ಕನೆಕ್ಟ್ ಆಗುವಂಥ ಕಥೆ. ನಾಯಕನಿಗೆ ಹಲವಾರು ತೊಂದರೆ, ತೊಳಲಾಟಗಳಿದ್ದರೂ, ಪ್ರೇಕ್ಷಕರಿಗೆ ಸಖತ್ ಮನರಂಜನೆ ಒದಗಿಸುತ್ತದೆ. ಹೀರೋಯಿಸಂ, ಅನಗತ್ಯ ಬಿಲ್ಡಪ್ ಇತ್ಯಾದಿಗಳಿಲ್ಲದ ಒಂದು ಸುಂದರ ಮನರಂಜನಾತ್ಮಕ ಸಿನಿಮಾ. ಕೊಟ್ಟ ಕಾಸಿಗೆ ಮೋಸವಂತೂ ಆಗುವುದಿಲ್ಲ’ ಎನ್ನುತ್ತಾರೆ.
ಯಂಗ್ ಥಿಂಕರ್ಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕೆ.ಉಮೇಶ್ ಹಾಗೂ ಗಣೇಶ್ ಕೆ ಐತಾಳ್ ಜಂಟಿಯಾಗಿ ನಿರ್ಮಿಸಿದ್ದಾರೆ.
Related Articles
ಹಿರಿಯ ನಿರ್ದೇಶಕ ಭಗವಾನ್, ನವೀನ್ ಕೃಷ್ಣ, ಓಂ ಪ್ರಕಾಶ್ ರಾವ್, ಕಾರ್ತಿಕ್ ಕೊರ್ಡೇಲ್, ಅರ್ಚನಾ ಕೊಟ್ಟಿಗೆ, ವತ್ಸಲಾ ಮೋಹನ್, ದೀಪಕ್ ಭಟ್ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ರವಿಪ್ರಕಾಶ್ ರೈ