Advertisement

ಕಾಸರಗೋಡು: 2.55 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ

05:13 PM Jan 12, 2023 | Team Udayavani |

ಕಾಸರಗೋಡು: ಕರಿಪೂರ್‌ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್‌ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 2.55 ಕೋಟಿ ರೂ. ಮೌಲ್ಯದ 4.65 ಕಿಲೋ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

Advertisement

ಈ ಸಂಬಂಧ ಕಾಪ್ಪಾಡ್‌ ನಿವಾಸಿಯಾದ ಇಸ್ಮಾಯಿಲ್‌, ಅರಿಂಬ್ರ ನಿವಾಸಿ ಅಬ್ದುರೌಫ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಏರ್‌ ಕಾರ್ಗೋ ಕಾಂಪ್ಲೆಕ್ಸ್‌ ಮೂಲಕ ಚಿನ್ನ ಸಾಗಿಸಲು ಪ್ರಯತ್ನಿಸಲಾಗಿತ್ತು. ಕೇರಳದ ಹೊರಗಿನವರಿಗಾಗಿ ಈ ಚಿನ್ನವನ್ನು ತಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಡ್ರಿಲ್ಲಿಂಗ್‌ ಟ್ರ್ಯಾಕ್ಟರ್‌ ಮಗುಚಿ ಚಾಲಕ ಸಾವು:

ಕುಂಬಳೆ: ಡ್ರಿಲ್ಲಿಂಗ್‌ ಟ್ರ್ಯಾಕ್ಟರ್‌ ಮಗುಚಿ ಬಿದ್ದು ಚಾಲಕ ನೇಪಾಲ ನಿವಾಸಿ ಸುರೇಶ್‌ ಕುಲು (28) ಸಾವಿಗೀಡಾದ ಘಟನೆ ನಡೆದಿದೆ. ಚೇವಾರು ಇಳಿಜಾರಿನಲ್ಲಿ ಅಪಘಾತ ಸಂಭವಿಸಿದೆ.

ಗಂಭೀರ ಗಾಯಗೊಂಡ ಸುರೇಶ್‌ ಕುಲು ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಸುರೇಶ್‌ ಕುಲು ಜ. 11ರಂದು ಮೊದಲ ಬಾರಿಗೆ ಕೆಲಸಕ್ಕೆ ಸೇರಿರುವುದಾಗಿ ಡ್ರಿಲ್ಲಿಂಗ್‌ ಟ್ರ್ಯಾಕ್ಟರ್‌ ಮಾಲಕ ಆಶಿಕ್‌ ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next