Advertisement

ವಿಮಾನ ನಿಲ್ದಾಣದಲ್ಲಿ ಭರ್ಜರಿ ಬೇಟೆ: ಚಿನ್ನ, ಡ್ರಗ್ಸ್‌ ಪತ್ತೆ

01:19 PM Sep 24, 2022 | Team Udayavani |

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಹಾಗೂ ನಿಲ್ದಾಣದ ವಾಯು ಗುಪ್ತಚರ ದಳದ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ವಿದೇಶದಿಂದ ಚಿನ್ನ ಹಾಗೂ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಬ್ಯಾಂಕಾಕ್‌ ಹಾಗೂ ದುಬೈನಿಂದ ಬಂದಿದ್ದ ಇಬ್ಬರು ಪ್ರಯಾಣಿಕರಿಂದ 20 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಘಾನಾ ದೇಶದಿಂದ ಆಗಮಿಸಿದ್ದ ವ್ಯಕ್ತಿಯಿಂದ 13 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆದಿದ್ದಾರೆ.

Advertisement

ಹೊಟ್ಟೆಯಲ್ಲಿ ನುಂಗಿದ್ದ ಮಾತ್ರೆಯಲ್ಲಿ ಡ್ರಗ್ಸ್‌ :

ದೇವನಹಳ್ಳಿ: ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಘಾನಾ ದೇಶದಿಂದ ಆಗಮಿಸಿದ್ದ ಪ್ರಯಾಣಿಕನಿಂದ 1.2 ಕೆ.ಜಿ ಕೊಕೇನ್‌ ವಶಕ್ಕೆ ಪಡೆಯಲಾಗಿದೆ. ಹೊಟ್ಟೆಯಲ್ಲಿ ನುಂಗಿದ್ದ ಮಾತ್ರಗಳಲ್ಲಿ ಡ್ರಗ್ಸ್‌ ತುಂಬಿಕೊಂಡಿರುವುದು ಕಂಡು ಬಂದಿದೆ.

ವಾಯು ಗುಪ್ತಚರ ದಳ ಹಾಗೂ ಕಸ್ಟಮ್ಸ್‌ ಅಧಿಕಾರಿಗಳು ಜಂಟಿ ಕಾರ್ಯಾ ಚರಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿ ದೆ. ಈತ 104 ಕ್ಯಾಪುಲ್ಸ್ ಗಳಲ್ಲಿ (ಮಾತ್ರೆ ) 1.2 ಕೆ.ಜಿ. ಕೊಕೇನ್‌ ಶೇಖರಿಸಿದ್ದನು. ಇದರ ಮೌಲ್ಯ 13.7 ಕೋಟಿ ರೂ. ಆಗಿದೆ. ಡ್ರಗ್ಸ್‌ ಈತನನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತನ ಹೊಟ್ಟೆಯಲ್ಲಿ 104 ಕ್ಯಾಪುಲ್ಸ್ ಮಾತ್ರೆಗಳಿದ್ದು, ಅವುಗಳಲ್ಲಿ ಕೊಕೇನ್‌ ತುಂಬಿಕೊಂಡು ಕಳ್ಳ ಸಾಗಣೆಗೆ ಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ. ‌

ಬಟ್ಟೆ ಗುಂಡಿ, ನಟ್‌ ಬೋಲ್ಡ್‌ನಲ್ಲಿ ಚಿನ್ನ :

Advertisement

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಕ್ಕಳ ಬಟ್ಟೆ ಗುಂಡಿಗಳಲ್ಲಿ ಹಾಗೂ ಲಗೇಜ್‌ ಬ್ಯಾಗ್‌ನಲ್ಲಿರುವ ನಟ್‌ ಹಾಗೂ ಬೋಲ್ಟ್‌ಗಳಲ್ಲಿ ಅಕ್ರಮವಾಗಿ ಚಿನ್ನವನ್ನು ಬಚ್ಚಿಟ್ಟಿದ್ದ ಪ್ರಯಾಣಿಕ ಸಿಕ್ಕಿಬಿದ್ದಿದ್ದಾನೆ. ಬ್ಯಾಂಕಾಕ್‌ ಹಾಗೂ ಹಾಗೂ ದುಬೈನಿಂದ ಇಂಡಿಗೋ ವಿಮಾ ನಗಳ ಮೂಲಕ ಬಂದಿದ್ದ ಪ್ರಯಾಣಿಕ ಮಕ್ಕಳ ಬಟ್ಟೆಯ ಗುಂಡಿಗಳಿಗೆ ಇರುವ ಲೋಹದ ವಸ್ತುಗಳನ್ನು ಚಿನ್ನದಿಂದ ಮಾಡಿಸಿದ್ದನು. ಅನುಮಾನ ಬಾರದ ರೀತಿಯಲ್ಲಿ ಕಳ್ಳ ಸಾಗಣೆಗೆ ಯತ್ನಿಸುತ್ತಿದ್ದನು. ವಿಮಾನ ನಿಲ್ದಾಣದಲ್ಲಿ ವಾಯು ಗುಪ್ತಚರ ದಳದ (ಎಐಯು) ವಿಭಾಗದಿಂದ ತಪಾಸಣೆ ನಡೆಸುವ ಸಮಯದಲ್ಲಿ ಈ ಕೃತ್ಯ ಪತ್ತೆಯಾಗಿದ್ದು, 244.92 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 12.49 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲಗೇಜ್‌ ಬ್ಯಾಗ್‌ನ ಚಕ್ರದಲ್ಲಿತ್ತು ಚಿನ್ನ! :

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದ ಪ್ರಯಾಣಿಕನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ… ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ 142.1 ಗ್ರಾಂ ಚಿನ್ನದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ 7.38 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ತಪಾಸಣೆ ಮಾಡುತ್ತಿದ್ದ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನವನ್ನು ಸಾಗಿಸಲು, ಲಗೇಜ್‌ ಬ್ಯಾಗ್‌ನ ಚಕ್ರಗಳಲ್ಲಿ ತುಂಡು, ತುಂಡಾಗಿ ಚಿನ್ನವನ್ನು ಆರೋಪಿಯು ಶೇಖರಿಸಿದ್ದನು. ಬ್ಯಾಗ್‌ ಚಕ್ರದಲ್ಲಿ ಚಿನ್ನದ ತುಂಡುಗಳು ಹಾಗೂ ಅದರ ಪೌಚ್‌ನಲ್ಲಿ ಚಿನ್ನದ ಕಾಯಿನ್‌ ಮತ್ತು ಸರವನ್ನು ಮುಚ್ಚಿಟ್ಟು ಕಳ್ಳ ಸಾಗಣೆ ಮಾಡಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿ ದೆ. ಆರೋಪಿಯನ್ನು ನ್ಯಾಯಾಂಗ ಬಂಧ ನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next