Advertisement

ಚಿನ್ನಾಭರಣ ಸೇರಿ 35 ವಸ್ತುಗಳ ಕಸ್ಟಮ್ಸ್‌ ಸುಂಕ ಹೆಚ್ಚಳ ಸಾಧ್ಯತೆ

11:02 PM Jan 09, 2023 | Team Udayavani |

ಹೊಸದಿಲ್ಲಿ: 2023ರ ಕೇಂದ್ರ ಬಜೆಟ್‌ ಮಂಡಿಸಲು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಹಲವು ಸುತ್ತಿನ ಬಜೆಟ್‌ ಪೂರ್ವಭಾವಿ ಸಭೆಗಳು ಜರಗಿವೆ. ವರದಿ ಯೊಂದರ ಪ್ರಕಾರ, ಅಬಕಾರಿ ಸುಂಕದ ಸಂಭವನೀಯ ಹೆಚ್ಚಳಕ್ಕಾಗಿ 35 ವಸ್ತುಗಳ ಪಟ್ಟಿಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ.

Advertisement

ಚಿನ್ನಾಭರಣ, ಖಾಸಗಿ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳು, ಪ್ಲಾಸ್ಟಿಕ್‌ ವಸ್ತುಗಳು, ಹೊಳಪಿನ ಕಾಗದ, ವಿಟಮಿನ್ಸ್‌ ಸಪ್ಲಿಮೆಂಟ್ಸ್‌ ಸಹಿತ 35 ವಸ್ತುಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಲು ಕೇಂದ್ರ ಸರಕಾರ ಯೋಜಿಸಿದೆ.

ಅಗತ್ಯವಲ್ಲದ ವಸ್ತುಗಳಿಗೆ ಮಾತ್ರ ಅಬಕಾರಿ ಸುಂಕ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಫೆ. 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2023ರ ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next