Advertisement

ಸದ್ಯವೇ ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿ ಬದಲಾವಣೆ ನೀತಿ?

04:41 PM Jul 02, 2022 | Team Udayavani |

ಹೊಸದಿಲ್ಲಿ: ಎಲೆಕ್ಟ್ರಿಕ್‌ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬ್ಯಾಟರಿ ಬದಲಾಯಿಸಿಕೊಳ್ಳಲು ಅನುವು ಮಾಡಿಕೊಡುವುದಕ್ಕೆ ಸಂಬಂಧಿಸಿದ ನೀತಿಯ ವಿವರಗಳನ್ನು ಈ ತಿಂಗಳ ಉತ್ತರಾರ್ಧದಲ್ಲಿ ಸರಕಾರ ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

ಇದು ಜಾರಿಗೆ ಬಂದರೆ ಈ ವಾಹನಗಳ ಮಾಲಕರು ಖಾಲಿಯಾದ ಬ್ಯಾಟರಿಗಳನ್ನು ಚಾರ್ಜಿಂಗ್‌ ಸ್ಟೇಶನ್‌ಗಳಲ್ಲಿ ಚಾರ್ಜ್‌ ಆಗಿರುವ ಬ್ಯಾಟರಿಗಳಿಗೆ ಬದಲಾಯಿಸಿ ಕೊಳ್ಳಲು ಸಾಧ್ಯವಾಗುತ್ತದೆ; ಚಾರ್ಜ್‌ ಮಾಡಿಸಿಕೊಳ್ಳಲು ಕಾಯಬೇಕಾದ ಅಗತ್ಯ ಇರುವುದಿಲ್ಲ.

ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದ ಈ ಯೋಜನೆಯನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿಗಳ ಗಾತ್ರವನ್ನು ಯಾವುದೇ ವಾಹನಗಳಲ್ಲಿ ಬಳಕೆ ಮಾಡಬಹುದಾದಂತೆ ಏಕರೂಪಕ್ಕೆ ತರುವುದು ಈ ಯೋಜನೆಯ ಪ್ರಧಾನ ಅಂಶ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next