ಹೊಸದಿಲ್ಲಿ: ಕೇಂದ್ರ ಸರಕಾರದ ನೋಟು ರದ್ದತಿ ನಿರ್ಣಯದ 6 ವರ್ಷಗಳ ಬಳಿಕವೂ ದೇಶದಲ್ಲಿ ನಗದು ಚಲಾವಣೆಯೇ ಮುಂಚೂಣಿಯಲ್ಲಿದ್ದು, ಈ 6 ವರ್ಷದಲ್ಲಿ ಸಾರ್ವಜನಿಕರ ನಗದು ಬಳಕೆಯ ಪ್ರಮಾಣ ಶೇ. 83ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಈ ಕುರಿತ ದತ್ತಾಂಶಗಳನ್ನು ಆರ್‌ಬಿಐ ಬಿಡುಗಡೆ ಗೊಳಿಸಿದ್ದು, ನೋಟು ರದ್ದತಿಗೆ ಮುನ್ನ ಅಂದರೆ, 2016ರ ನ. 4ರ ಸಮಯಕ್ಕೆ ದೇಶದಲ್ಲಿ 17.74 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿತ್ತು. ಈಗ ಈ ಮೌಲ್ಯ ದ್ವಿಗುಣಗೊಂಡಿದ್ದು, 2022ರ ಡಿ. 23ರ ವೇಳೆಗೆ 32.42 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂದು ತಿಳಿಸಿದೆ.
ನೋಟು ಅಮಾನ್ಯದ ಬಳಿಕವೂ ದೇಶದಲ್ಲಿ ನಕಲಿ ನೋಟುಗಳ ಮುದ್ರಣ ಸಮಸ್ಯೆ ಮುಂದು ವರಿದಿದ್ದು, 2016ರಿಂದ ಈವರೆಗೆ 245.33 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿ ಆರ್‌ಬಿ) ತಿಳಿಸಿದೆ.
ನೋಟ್ ರದ್ದತಿ ಆದ ವರ್ಷದಲ್ಲಿ 15.92 ಕೋಟಿ ರೂ. ಮೌಲ್ಯದ ನಕಲಿ ನೋಟು ವಶಪಡಿಸಿಕೊಂಡಿದ್ದು, 2020ರಲ್ಲಿ 92.17 ಕೋಟಿ ರೂ. ಮೌಲ್ಯದ ನಕಲಿ ನೋಟು ವಶಪಡಿಸಿಕೊಳ್ಳಲಾಗಿದೆ.