Advertisement

ಕಾಸರಗೋಡು: ಪತ್ತೆಯಾಯ್ತು ಮಾನವ ಮುಖವನ್ನು ಹೋಲುವ ಜೇಡ!

11:07 PM Sep 14, 2020 | mahesh |

ಕಾಸರಗೋಡು: ಪ್ರಕೃತಿ ಅಚ್ಚರಿಯ ತಾಣವೇ ಸರಿ. ಇಲ್ಲಿ ನಮ್ಮ ಊಹೆಗೂ ನಿಲುಕದ ಹಲವಾರು ಕೌತುಕಗಳು ಪ್ರತಿನಿತ್ಯವೆಂಬಂತೆ ನಡೆಯುತ್ತಿರುತ್ತದೆ.

Advertisement

ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಜೀವ ವೈವಿಧ್ಯಗಳು ಬದುಕುತ್ತಿವೆ ಮತ್ತು ಅವುಗಳಲ್ಲಿ ಕೆಲವು ಜೀವರಾಶಿಗಳು ಕೌತುಕದ ಕೇಂದ್ರವಾಗಿ ನಮ್ಮ ಗಮನವನ್ನು ಸೆಳೆಯುತ್ತವೆ.

ಇದಕ್ಕೊಂದು ನಿದರ್ಶನವೆಂಬಂತೆ ಮಾನವ ಮುಖವನ್ನು ಹೋಲುವ ಜೇಡವೊಂದು ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ.

ವೆಳ್ಳರಿಕುಂಡು ಚಿರಕಯತ್‌ನಲ್ಲಿ ಪತ್ತೆಯಾದ ಮಾನವ ಮುಖವನ್ನು ಹೋಲುವ ಜೇಡ ಇದೀಗ ಸ್ಥಳೀಯರಲ್ಲಿ ಕೌತುಕ ಮೂಡಿಸಿದೆ.

ಚಿರಕಯತ್‌ನ ಪಾಟತ್ತಿಲ್‌ ಅಪ್ಪುಕುಟ್ಟನ್‌ ನಾಯರ್‌ ಅವರ ಕೃಷಿ ತೋಟದಲ್ಲಿ ಈ ಜೇಡ ಪತ್ತೆಯಾಗಿದೆ.

Advertisement

ಆರೆಂಜ್‌, ಹಳದಿ, ಕಪ್ಪು, ಬಿಳಿ, ಬೂದು ಬಣ್ಣಗಳ ಮಿಶ್ರಣದ ಈ ಜೇಡದ ಮುಖ ಮಾನವನ ಮುಖವನ್ನು ಹೋಲುತ್ತಿದೆ.

ಬಾಯಿ, ಕಣ್ಣು, ಮೂಗು, ಕಿವಿ ಇದ್ದು, ಕಿವಿಯ ಎರಡು ಭಾಗಗಳಲ್ಲಿ ರೋಮವಿದೆ. ಕಾಳು ಮೆಣಸು ಬಳ್ಳಿಯಲ್ಲಿ ಬಲೆ ನೇಯ್ದ ಜೇಡ ಕಂಡು ಬಂದಿದೆ. ದೇಶದಲ್ಲಿ ಸುಮಾರು 1,442 ಜಾತಿಯ ಜೇಡಗಳು ಈವರೆಗೆ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next