Advertisement

ಕ್ರೀಡಾ ಜಗತ್ತಿನ ಕುತೂಹಲಕ್ಕೆ ಕೋವಿಡ್ ತಣ್ಣೀರು

01:08 PM May 07, 2020 | sudhir |

ಕೋವಿಡ್‌-19 ಬಂದ ಬಳಿಕ ಜಗತ್ತಿನಾದ್ಯಂತ ಎಲ್ಲಾ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಕೂಟಗಳು ರದ್ದಾಗಿವೆ. ಪ್ರಮುಖ ಕ್ರೀಡಾಕೂಟಗಳ ಪಟ್ಟಿ ಇಲ್ಲಿದೆ. ಟೋಕಿಯೋದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌ ನ್ನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ 2021ರ ಜುಲೈ 23 ಕ್ಕೆ ಮುಂದೂಡಿದ್ದಾರೆ.

Advertisement

ಫ‌ುಟ್ಬಾಲ್‌
ಅಮೆರಿಕದ ಅತಿ ದೊಡ್ಡ ಕ್ರೀಡಾಕೂಟ ಮೇಜರ್‌ ಲೀಗ್‌ ಸಾಕರ್‌ (ಎಂಎಲ್ಎಸ್‌) ಫ‌ುಟ್ಬಾಲ್‌ ಲೀಗ್‌ ಜೂನ್‌ 8ರ ವರೆಗೆ ಮುಂದೂಡಲಾಗಿದೆ. ಮೇ ತಿಂಗಳಲ್ಲಿ ನಡೆಯಬೇಕಿದ್ದ ಆಫ್ರಿಕನ್‌ ಚಾಂಪಿಯನ್ಸ್‌ ಲೀಗ್‌ನ ಫ‌ುಟ್ಬಾಲ್‌ನ ಸೆಮಿಫೈನಲ್‌ ಪಂದ್ಯ, ಜೂನ್‌ 4ರಿಂದ ಜೂನ್‌ 7ರ ವರೆಗೆ ನಿಗದಿಯಾಗಿದ್ದ CONCACAF (ಕಾನ್ಫೆಡರೇಶನ್‌ ಆಫ್ ನಾರ್ತ್‌, ಸೆಂಟ್ರಲ್‌ ಅಮೆರಿಕನ್‌ ಮತ್ತು ಕೆರಿಬಿಯನ್‌ ಅಸೋಸಿಯೇಷನ್‌ ಫ‌ುಟ್ಬಾಲ್‌) ಫೈನಲ್‌ ಪಂದ್ಯಾಟ ಮುಂದೂಡಲಾಗಿದೆ.

ಈ ವರ್ಷದ ಕೋಪಾ ಅಮೆರಿಕ ಕ್ರೀಡಾಕೂಟ, ಯುರೋ 2020 ಪಂದ್ಯಾವಳಿಯನ್ನು 2021ರ ವರೆಗೆ ಮುಂದೂಡಲಾಗಿದೆ. ಮಾರ್ಚ್‌ ಮತ್ತು ಜೂನ್‌ನಲ್ಲಿ ನಡೆಯಲಿರುವ ಏಷ್ಯನ್‌ ವಿಶ್ವಕಪ್‌ ಅರ್ಹತಾ ಪಂದ್ಯಗಳನ್ನು ಮುಂದೂಡಲು ಫಿಫಾ ಮತ್ತು ಏಷ್ಯನ್‌ ಫ‌ುಟ್ಬಾಲ್‌ ಒಕ್ಕೂಟ ನಿರ್ಧರಿಸಿದೆ.

ಕ್ರಿಕೆಟ್‌
ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ 20 ಪಂದ್ಯಾವಳಿಯನ್ನು ಮುಂದೂಡಲಾಗಿದೆ. ಕರಾಚಿಯಲ್ಲಿ ನಡೆಯುವ ಪಾಕಿಸ್ಥಾನ ಸೂಪರ್‌ ಲೀಗ್‌ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ಆಡಲಾಗುವುದು ಎಂದು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಹೇಳಿದೆ.

ಮ್ಯಾರಥಾನ್‌
ಲಂಡನ್‌ ಮ್ಯಾರಥಾನ್‌ ಅನ್ನು ಅಕ್ಟೋಬರ್‌ 4ರ ವರೆಗೆ ಮುಂದೂಡಲಾಗಿದೆ. ಬೋಸ್ಟನ್‌ ಮ್ಯಾರಥಾನ್‌ ಸೆಪ್ಟೆಂಬರ್‌ 14 ರಂದು ನಡೆಯುವ ನಿರೀಕ್ಷೆಯಿದೆ. ಆ್ಯಮ್‌ಸ್ಟರ್‌ಡ್ಯಾಂ, ಪ್ಯಾರಿಸ್‌ ಮತ್ತು ಬಾರ್ಸಿಲೋನಾ ಮ್ಯಾರಥಾನ್‌ ಮುಂದೂಡಲಾಗಿದೆ.

Advertisement

ಅಥ್ಲೆಟಿಕ್ಸ್‌
2021ರ ಆಗಸ್ಟ್‌ನಲ್ಲಿ ಒರೆಗಾನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಈ ಸಮಯದಲ್ಲಿ ಒಲಿಂಪಿಕ್‌ ಕ್ರೀಡಾಕೂಟ ನಡೆಯಲಿದ್ದು ಈ ಕಾರಣಕ್ಕೆ 2022ರ ಜುಲೈಗೆ ಮುಂದೂಡಲಾಗಿದೆ.

ಫಾರ್ಮುಲಾ 1
ಆಗಸ್ಟ್‌ 2ರಂದು ನಿಗದಿಯಾಗಿದ್ದ ಹಂಗೇರಿಯನ್‌ ಫಾರ್ಮುಲಾ ಒನ್‌ ಗ್ರ್ಯಾಂಡ್‌ ಪ್ರಿಕ್ಸ್‌ ಯಾವುದೇ ಪ್ರೇಕ್ಷಕರಿಲ್ಲದೇ ನಡೆಯಲಿದೆ. ಬ್ರಿಟಿಷ್‌ ಗ್ರ್ಯಾಂಡ್‌ ಪ್ರಿಕ್ಸ್‌ ಸಿಲ್ವ ಸ್ಟೋರ್‌ನಲ್ಲಿ ಇದೇ ಮಾದರಿಯಲ್ಲಿ ಪ್ರಾರಂಭವಾಗಿದೆ. ಆಸ್ಟ್ರೇಲಿಯಾದ ಜಿಪಿ, ವಿಯೆಟ್ನಾಂ ಗ್ರ್ಯಾಂಡ್‌ ಪ್ರಿಕ್ಸ್‌ ಅನ್ನು ಮುಂದೂಡ ಲಾಗಿದೆ.

ಟೆನ್ನಿಸ್‌
ಇಂಟರ್‌ನ್ಯಾಶನಲ್‌ ಟೆನ್ನಿಸ್‌ ಫೆಡರೇಶನ್‌ (ಐಟಿಎಫ್) ತನ್ನ ಎಲ್ಲಾ 900 ಪಂದ್ಯಾವಳಿಗಳನ್ನು ಮುಂದೂಡಿದೆ. 2020ರ ವಿಂಬಲ್ಡನ್‌ ಟೆನ್ನಿಸ್‌ ಚಾಂಪಿಯನ್‌ಶಿಪ್‌‌ಗಳನ್ನು ರದ್ದುಪಡಿಸಲಾಗಿದೆ. ಎರಡನೇ ವಿಶ್ವಯುದ್ಧದ ಬಳಿಕ ಇದೇ ಮೊದಲ ಬಾರಿ ಮುಂದೂಡಿಕೆಯಾಗಿದೆ. ಹೂಸ್ಟನ್‌ನಲ್ಲಿ ಯುಎಸ್‌ ಮಹಿಳಾ ಮುಂದೂಡಲಾಗಿದೆ. ಫ್ರೆಂಚ್‌ ಓಪನ್‌ ಅನ್ನು ಸೆಪ್ಟೆಂಬರ್‌ 20ರಿಂದ ಅಕ್ಟೋಬರ್‌ 4ರ ವರೆಗೆ ಮುಂದೂಡಲಾಗಿದೆ.

ಬಾಕ್ಸಿಂಗ್‌
ಜೂನ್‌ 20ರಂದು ನಿಗದಿಯಾಗಿದ್ದ ಐಬಿಎಫ್ ನ  ವಿಶ್ವ ಬಾಕ್ಸಿಂಗ್‌ ಅನ್ನು ಮುಂದೂಡಲಾಗಿದೆ. ಏಷ್ಯಾ ಮತ್ತು ಓಷಿಯಾನಿಯಾದ ಟೋಕಿಯೊ ಒಲಿಂಪಿಕ್‌ ಬಾಕ್ಸಿಂಗ್‌ ಅರ್ಹತಾ ಪಂದ್ಯಗಳನ್ನು ಚೀನದಿಂದ ಜೋರ್ಡನ್‌ಗೆ ಸ್ಥಳಾಂತರಿಸಲಾಗಿದೆ.

ನ್ಯಾಶನಲ್‌ ಬಾಸ್ಕೆಟ್ಬಾಲ್‌ ಅಸೋಸಿಯೇಷನ್‌ ಎಲ್ಲಾ ಪಂದ್ಯಾಟಗಳನ್ನು ರದ್ದು ಮಾಡಿದೆ. ಡೆನ್ಮಾರ್ಕ್‌ನಲ್ಲಿ ನಡೆಯಬೇಕಿರುವ ಬ್ಯಾಡ್ಮಿಂಟನ್‌ ಥಾಮಸ್‌ ಮತ್ತು ಉಬರ್‌ಕಪ್‌ ಫೈನಲ್‌ಗ‌ಳನ್ನು ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next