Advertisement

ದಾಸೋಹ ಸಂಸ್ಕೃತಿ ಅನುಸರಿಸಿ: ಡಾ|ಬಸವಲಿಂಗ ಪಟ್ಟದ್ದೇವರು

04:40 PM Sep 03, 2022 | Team Udayavani |

ಭಾಲ್ಕಿ: ದಾಸೋಹದಿಂದ ಜೀವನದಲ್ಲಿ ಶಾಂತಿ, ಸಮಾಧಾನ ನೆಲಸಲು ಸಾಧ್ಯ ಅಂತಹ ಸಂಸ್ಕೃತಿ ಪ್ರತಿಯೊಬ್ಬರು ಅನುಸರಿಸಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ಪಟ್ಟಣದ ಲೆಕ್ಚರ್‌ ಕಾಲೋನಿಯ ರಿಕ್ಕೆ ಲೇಔಟ್‌ನಲ್ಲಿ ಮಹಾದೇವ ಮಂದಿರ ಉದ್ಘಾಟನೆ ಮತ್ತು ಕಳಸಾರೋಹಣ ನಿಮಿತ್ತ ಆಯೋಜಿಸಿದ್ದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಸವಾದಿ ಶರಣರು ದಾಸೋಹ ತತ್ವಕ್ಕೆ ಬಹಳಷ್ಟು ಮಹತ್ವ ನೀಡಿದ್ದರು. ದಾಸೋಹ ಲಿಂಗಾಯತ ಧರ್ಮದ ಜೀವಾಳವೇ ಆಗಿದೆ. ವಿಶ್ವಗುರು ಬಸವಣ್ಣನವರು ಕಾಯಕದ ಜತೆಗೆ ದಾಸೋಹ ತತ್ವವನ್ನು ಹೇಳುವ ಮೂಲಕ ಆರ್ಥಿಕ ಸಮಾನತೆ ತಂದರು. ಅಷ್ಟೆ ಅಲ್ಲದೆ ಕಾಯಕ ಮತ್ತು ದಾಸೋಹ ತತ್ವಗಳು ಧರ್ಮದ ಚೌಕಟ್ಟಿನಲ್ಲಿ ಅಳವಡಿಸಿ ಅದಕ್ಕೆ ಪಾವಿತ್ರತೆ ತಂದು ಕೊಟ್ಟರು. ಎಲ್ಲರೂ ಬಸವಾದಿ ಶರಣರ ಕಾಯಕ, ದಾಸೋಹ ತತ್ವ ಮೈಗೂಡಿಸಿಕೊಂಡು ಸಂತೃಪ್ತ ಜೀವನ ಸಾಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಧನರಾಜ ರಿಕ್ಕೆ, ಆಕಾಶ ರಿಕ್ಕೆ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next