Advertisement
ಮೋತಿ ವೀರಪ್ಪ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಧರ್ಮ ಜಾಗರಣ ಸಮನ್ವಯ ಸಮಿತಿ ಲೋಕ ಕಲ್ಯಾಣಾರ್ಥ ಹಮ್ಮಿಕೊಂಡಿದ್ದ ಶ್ರೀ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
Related Articles
Advertisement
ಸಮಿತಿಯ ಮುಖ್ಯ ವಕ್ತಾರ ಪಟ್ಟಾಭಿರಾಮ್ ಮಾತನಾಡಿ, ನಮ್ಮೆಲ್ಲರ ಪ್ರಯತ್ನದಿಂದ ಇಡೀ ಭಾರತ ವಿಕಾಸ ಆಗುವ ಮೂಲಕ ಜಗತ್ತಿಗೆ ತಾಯಿ ಆಗಬೇಕು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಭಾರತ ಸೂಪರ್ ಪವರ್ ಆಗಬೇಕೆಂದು ಕನಸು ಹೊಂದಿದ್ದರು. ಸೂಪರ್ ಪವರ್ ಎಂದರೆ ಮನುಷ್ಯನ ಮನಸ್ಸು, ಆತ್ಮ, ಬುದ್ಧಿ ವಿನಃ ಯಾವುದೇ ತಂತ್ರಜ್ಞಾನದ ಕಂಪ್ಯೂಟರ್, ಯಂತ್ರ, ಹಣವಲ್ಲ ಎಂದು ತಿಳಿಸಿದರು.
ದೇಶದ ಅವನತಿಗೆ ನಮ್ಮ ಧರ್ಮದ ಬಗ್ಗೆ ನಾವು ಹೊಂದಿರುವ ಅಜ್ಞಾನ ಕಾರಣ. ವೀರಶೈವ-ಲಿಂಗಾಯಿತ, ಕುರುಬ, ಇಸ್ಲಾಂ, ಕ್ರಿಶ್ಚಿಯನ್ ಇವು ಮತಗಳು ಮಾತ್ರ. ಆದರೆ, ಧರ್ಮ ಕೇವಲ ಒಂದು ಜಾತಿ, ಸಂಪ್ರದಾಯ, ಭಾಷೆ ಅಲ್ಲ. ಅದು ಎಲ್ಲವನ್ನು ಒಳಗೊಂಡಿರುವಂಥದ್ದು, ಅದೇ ನಿಜವಾದ ಧರ್ಮ. ಧರ್ಮವೇ ಪುಣ್ಯ, ಅಧರ್ಮವೇ ಪಾಪ. ಧರ್ಮ ಪರಂಪರೆಯ ಉಳಿವಿನ ಕೆಲಸಕ್ಕೆ ಸತ್ಯನಾರಾಯಣ ಸ್ವಾಮಿ ಪೂಜೆಯೂ ಒಂದು ಮಾರ್ಗವಾಗಿದೆ ಎಂದು ಹೇಳಿದರು.
ಪ್ರಪಂಚದಲ್ಲಿ ಶಾಂತಿ, ಸುಖ, ನೆಮ್ಮದಿ ಇಲ್ಲದ್ದಕ್ಕೆ ಇಡೀ ವಿಶ್ವ ಭಾರತದತ್ತ ಮುಖ ಮಾಡಿ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಧರ್ಮಿಯರು ತಮ್ಮ ತನು, ಮನ, ಧನವನ್ನು ಸಮಾಜದ ಒಳಿತಿಗೆ ಅರ್ಪಣೆ ಮಾಡುವುದರೊಟ್ಟಿಗೆ ಬದುಕನ್ನು ಹಸನಾಗಿಸಿಕೊಳ್ಳಬೇಕು. ಭಾರತ ತನ್ನ ಸ್ವ-ಸಾಮರ್ಥ್ಯದ ಬಲದಿಂದ ಪ್ರಗತಿ ಹೊಂದಬೇಕು ಎಂದರು.
ಧರ್ಮಜಾಗರಣ ಪ್ರಮುಖ್ ಮುನಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಹಗಲಿರುಳು ದೇಶ ರಕ್ಷಿಸುವ ಯೋಧರು ಬಲಿದಾನ, ತ್ಯಾಗಗಳ ಪ್ರತಿರೂಪ. ಹಾಗಾಗಿ ಇಂದಿನ ಯುವಪೀಳಿಗೆಗೆ ಅಂಥವರು ಮಾದರಿ ಆಗಬೇಕೆ ಹೊರತು ಚಲನಚಿತ್ರ ನಟ-ನಟಿಯರಲ್ಲ, ಕ್ರಿಕೆಟ್ ಆಡುವವರಂತಹ ಸೋಮಾರಿಗಳಲ್ಲ ಎಂದು ಕಿವಿಮಾತು ಹೇಳಿದರು.
ಸಮಿತಿಯಿಂದ ಹಮ್ಮಿಕೊಂಡಿರುವ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಮಂಗಳಮುಖೀಯರು, ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಸಾವಿರಾರು ಕುಟುಂಬಗಳು ಭಾಗವಹಿಸಿರುವುದು ಸಮಾನತೆಯ ಸಂಕೇತವಾಗಿದೆ. ಧರ್ಮ ಯಾವುದೇ ಭೇದವಿಲ್ಲದೇ ಎಲ್ಲರಿಗೂ ಅವಕಾಶ ನೀಡಿರುವ ಸಮಾನ ವೇದಿಕೆಯಾಗಿದೆ. ಶೋಷಿತ, ಅವಕಾಶ ವಂಚಿತರನ್ನು ಒಟ್ಟಿಗೆ ಸೇರಿಸುವ ಕಾರ್ಯ ಆರ್‌ಎಸ್‌ಎಸ್‌ನಿಂದ ನಿರಂತರವಾಗಿ ನಡೆಯುತ್ತಿದೆ. ಇದು ಈ ಧಾರ್ಮಿಕ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಬಿ. ಶಂಕರನಾರಾಯಣ, ಕಾರ್ಯದರ್ಶಿ ಅಜಯ್‌ಕುಮಾರ್, ಡಿ. ಕರಿಯಪ್ಪ, ಜಿ. ಕೊಟ್ರೇಶ್ ಗೌಡ ಇತರರು ಉಪಸ್ಥಿತರಿದ್ದರು.