Advertisement

ಕಲೆ ನಾಡಿನ ಸಂಸ್ಕೃತಿ ಪ್ರತೀಕ: ಪದ್ಮಾಕರ

10:16 AM Feb 21, 2018 | Team Udayavani |

ಕಲಬುರಗಿ: ಕಲೆಗಳು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಪದ್ಮಾಕರ ಕುಲಕರ್ಣಿ ಹೇಳಿದರು. ಇಲ್ಲಿನ ಪ್ರತಿಷ್ಠಿತ ಭರತ ನಾಟ್ಯ ತರಬೇತಿ ಕೇಂದ್ರವಾಗಿರುವ ವರ್ಣಸಿಂಧು ನೃತ್ಯ ಕಲಾ ಕೇಂದ್ರದ 22ನೇ ವಾರ್ಷಿಕೋತ್ಸವ ನಿಮಿತ್ತ ನಗರದ ಎಸ್‌.ಎಂ. ಪಂಡಿತ ರಂಗ ಮಂದಿರದಲ್ಲಿ ನಡೆದ ನರ್ಮದಾ ನೃತ್ಯೋತ್ಸವ -2018 ಹಾಗೂ ಭಾರತ ನೃತ್ಯಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕಲೆ ರಕ್ಷಣೆ ಹಾಗೂ ಬೆಳವಣಿಗೆಗೆ ಇಚ್ಛಾಶಕ್ತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನೃತ್ಯಕಲೆ, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಜತೆಗೆ ಅನೇಕ ನೃತ್ಯಪಟುಗಳನ್ನು ರೂಪಿಸಿರುವ ನೃತ್ಯಗುರು ಅನಂತ ಚಿಂಚನಸೂರ ಅವರು, ಸಂಸ್ಕೃತಿ ರಕ್ಷಣೆಗೂ ಅಮೋಘ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೋರಂಟಿ ಹನುಮಾನ ದೇವಾಲಯದ ಧರ್ಮದರ್ಶಿ ರಾಜು ಕಮಲಾಪುರ ಮಾತನಾಡಿ, ಹಳೆ ಮೈಸೂರು, ಬೆಂಗಳೂರ ಭಾಗದಲ್ಲಿ ಈ ಕಲೆಗೆ ಪ್ರೋತ್ಸಾಹ ಇದೆ. ಅದನ್ನು ಹಿಂದುಳಿದ ಹೈ.ಕ ಪ್ರದೇಶದ ಮಕ್ಕಳಿಗೆ ಕಲಿಸಿಕೊಡಲು ಕಲಬುರಗಿಯಲ್ಲಿ ವರ್ಣಸಿಂಧು ನೃತ್ಯ ಕಲಾ ಕೇಂದ್ರ ಹುಟ್ಟು ಹಾಕಿ ಭರತ ನಾಟ್ಯ ಕಲಿಸುವ ಜತೆಗೆ ಚಿತ್ರಕಲೆ, ಪೆಂಟಿಂಗ್‌,
ಕರಕುಶಲ ವಸ್ತು ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು. 

ಸಂಗೀತ ಅಕಾಡೆಮಿ ಸದಸ್ಯ ಶಿವಣ್ಣ ಹೂಗಾರ ದೇಸಾಯಿಕಲ್ಲೂರ, ಹಿರಿಯ ಕಲಾವಿದ ಡಾ| ಸುಬ್ಬಯ್ಯ ಎಂ.ನೀಲಾ, ಗಂಗೋತ್ರಿ ವೇದಪಾಠ ಶಾಲೆಯ ವೇದಬ್ರಹ್ಮಶ್ರೀ ಮೋಹನ ಭಟ್‌ ಮತ್ತು ಅಣ್ಣಮ್ಮ ಭಟ್‌ ಜೋಶಿ, ಸಿದ್ದಿಮಾರುತಿ ದೇವಾಲಯ ಅರ್ಚಕ ನಾರಾಯಣ ಆಚಾರ್ಯ, ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಕಲಾವಿದ ಡಾ| ಎಸ್‌.ಎ.ಪಾಟೀಲ್‌, ಮಾಣಿಕರಾವ ಪೋದ್ದಾರ, ಶಾಂತಾ ಪೋದ್ದಾರ, ಡಾ| ಸ್ವಾಮಿರಾವ ಕುಲಕರ್ಣಿ, ಸರೋಜಾ ಅನಗಕರ್‌, ಸುಷ್ಮಾ ಕುಲಕರ್ಣಿ, ಅಶ್ವಿ‌ನಿ ಕುಲಕರ್ಣಿ, ಮಮತಾ ಬಿ.ವೈ, ದೇವಯಾನಿ ಉಪ್ಪಿನ,
ದೀಪಾಂಜಲಿ, ವೈಷ್ಣವಿ, ಮಾನಸ, ಬನಶಂಕರಿ ಬಿ.ಎಚ್‌ ಇದ್ದರು. ನಂತರ ವರ್ಣಸಿಂಧು ನೃತ್ಯಕಲಾ ಕೇಂದ್ರದ ವಿದ್ಯಾರ್ಥಿಗಳಾದ ಪದ್ಮಿನಿ, ಪ್ರತೀಕ್ಷಾ ಬಾಬುರಾವ ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ಮಕ್ಕಳಿಂದ ನಡೆದ ನೃತ್ಯ ಗೀತ ಕಾರ್ಯಕ್ರಮ ಜನಮನ ಸೆಳೆದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next