Advertisement

“ಸಂಸ್ಕೃತಿ ಮನೆ ಮನೆಗೆ ಪರಿಚಯವಾಗಲಿ”

02:18 PM Jan 28, 2021 | Team Udayavani |

ಧಾರವಾಡ: ದಾಸರ ಸಾಹಿತ್ಯ ಜತೆಗೆ ನಮ್ಮ ಸಂಸ್ಕೃತಿಯ ಪರಿಚಯ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಅಷ್ಟೇ ಅಲ್ಲ ಮನೆಮನೆಗೂ ತಲುಪುವಂತಾಗಬೇಕೆಂದು  ಹಿರಿಯ ಮನೋರೋಗ ತಜ್ಞ ಡಾ| ಆನಂದ ಪಾಂಡುರಂಗಿ ಹೇಳಿದರು.

Advertisement

ನಗರದ ಕವಿಸಂನಲ್ಲಿ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ, ಉತ್ತರಾದಿಮಠದತ್ತಿ ಕಾರ್ಯಕ್ರಮ ಅಂಗವಾಗಿ   ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2021 ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆಯೇ ಮೊದಲ ಪಾಠ ಶಾಲೆ. ಹೀಗಾಗಿ ದಾಸ ಸಾಹಿತ್ಯ ಮನೆ ಮನಕ್ಕೆ ತೀವ್ರಗತಿಯಲ್ಲಿ ತಲುಪಬೇಕಾದಲ್ಲಿ ಹಿರಿಯರು ಮೊದಲು ನಿತ್ಯ ಮನೆಯಲ್ಲಿ ಅವುಗಳನ್ನು ಅನುಸರಿಸಬೇಕು. ಅಂದಾಗ ಮಕ್ಕಳು ನಮ್ಮನ್ನು ನೋಡಿ ಕಲಿಯುತ್ತಾರೆ ಎಂದರು.

ನರಹರಿ ಅವತಾರ ವಿಷಯ ಕುರಿತು ಡಾ|ವೆಂಕಟ ನರಸಿಂಹಾಚಾರ್ಯ ಜೋಶಿ ಮಾತನಾಡಿ,ಹರಿದಾಸರು ಪರಿಪರಿಯಾಗಿ ಭಕ್ತಿ ಪರವಾಗಿ ಹಾಡಿದ ಸಾಹಿತ್ಯವೇ ದಾಸ ಸಾಹಿತ್ಯವಾಗಿದೆ  ಎಂದರು.

ಇದನ್ನೂ ಓದಿ:ಅಲೆಮಾರಿಗಳಿಗೆ ಸರ್ಕಾರಿ ಸೌಲಭ್ಯ ಮರೀಚಿಕೆ

ವಿದ್ವಾನ್‌ ಗೋವಿಂದ ವಿಠಲರಾವ್‌ ನವಲಗುಂದ ಮಾತನಾಡಿ, ಮನುಷ್ಯರಲ್ಲಿ ನರ ಮತ್ತು ಪಶು ಎರಡು ಸ್ವಭಾವ ಗುಣಗಳಿರುತ್ತವೆ. ಈಗ ಎಲ್ಲರೂ ಹೆಚ್ಚು ಮನುಷ್ಯತ್ವ ಬೆಳೆಸಿಕೊಳ್ಳಬೇಕು ಎಂದರು. ಸಾನಿಧ್ಯ ವಹಿಸಿದ್ದ ಹುಬ್ಬಳ್ಳಿಯ ವಿಶ್ವಭಾರತಿ ವೇದಪೀಠದ ಅಧ್ಯಕ್ಷ ಡಾ| ಸಮೀರಾಚಾರ್ಯ ಕಂಠಪಲ್ಲಿ ಮಾತನಾಡಿದರು.

Advertisement

ಸದಾನಂದ ಶಿವಳ್ಳಿ, ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಬಿ.ಗುತ್ತಲ ಇದ್ದರು. ಪ್ರಕಾಶಎಸ್‌. ಉಡಿಕೇರಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸತೀಶ ತುರುಮರಿ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್‌.ಬಿ. ಗಮನಗಟ್ಟಿ, ಶ್ರೀಧರ ಕುಲಕರ್ಣಿ ಸೇರಿದಂತೆ ಮಹಿಳಾ ಮಂಡಳದ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next