Advertisement

ಕರ್ನಾಟಕ ಕಲ್ಚರಲ್‌ ಫೌಂಡೇಶನ್‌ ಮದೀನಾ ಮುನವ್ವರ ಸೆಕ್ಟರ್‌ ಮಹಾಸಭೆ

05:24 PM Mar 28, 2017 | |

ಮುಂಬಯಿ: ಕರ್ನಾಟಕ ಕಲ್ಚರಲ್‌ ಫೌಂಡೇಶನ್‌ (ಕೆ.ಸಿ.ಎಫ್‌) ಮದೀನಾ ಮುನವ್ವರ ಸೆಕ್ಟರ್‌  ಇದರ ವಾರ್ಷಿಕ ಮಹಾಸಭೆಯು ಇಬ್ರಾಹಿಂ ಮದನಿ ಉಸ್ತಾದ್‌ ಕಡಬ ಇವರ ನೇತೃತ್ವದಲ್ಲಿ, ಅಧ್ಯಕ್ಷ ಅಶ್ರಫ್‌ ಸಖಾಫಿ ನೂಜಿ ಅವರ ಸಭಾಧ್ಯಕ್ಷತೆಯಲ್ಲಿ ಮದೀನಾದ ಹವಾಲಿಯ ಹೊಟೆಲ್‌ ಝಹ್ರತ್ತೈ ಸಭಾಗೃಹದಲ್ಲಿ  ಇತ್ತೀಚೆಗೆ ನಡೆಯಿತು.

Advertisement

ಫಾರೂಖ್‌ ಮುಸ್ಲಿಯಾರ್‌ ಕೊಡಗು  ಖೀರಾಯತ್‌ ಪ್ರಾರ್ಥನೆಗೈದರು. ಉಸ್ಮಾನ್‌ ಮಾಸ್ಟರ್‌ ಉದ್ದಬೆಟ್ಟು ಅವರು ಉದ್ಘಾಟಿಸಿದರು. ಚುನಾವಣಾ ಅಧಿಕಾರಿಯಾಗಿದ್ದ   ಕೆ.ಸಿ.ಎಫ್‌ ಮದೀನಾ ಮುನವ್ವರ ಪ್ರಾದೇಶಿಕ ಅಧ್ಯಕ್ಷ ಫಾರೂಖ್‌ ನುàಮಿ ಸರಳಿಕಟ್ಟೆ ಅವರ ನೇತೃತ್ವದಲ್ಲಿ,  ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನಲ್ವತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ನೂತನ ಸಮಿತಿಗೆ ಅಧ್ಯಕ್ಷರಾಗಿ ಅಶ್ರಫ್‌ ಸಖಾಫಿ ನೂಜಿ, ಪ್ರಧಾನ ಕಾರ್ಯದರ್ಶಿ ಆಗಿ ಅಶ್ರಫ್‌ ನ್ಯಾಶನಲ್‌, ಕೋಶಾಧಿಕಾರಿಯಾಗಿ ಇಸ್ಮಾಯಿಲ್‌ ಹಾಜಿ ಕಿನ್ಯ, ಜೊತೆ ಕಾರ್ಯದರ್ಶಿಹುಸೈನಾರ್‌ ಮಾಪಲ್‌ ಆಯ್ಕೆಯಾದರು.

ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಫಾರೂಖ್‌ ಮುಸ್ಲಿಯಾರ್‌ ಕೊಡಗು, ಕಾರ್ಯದರ್ಶಿಯಾಗಿ ಉಸ್ಮಾನ್‌ ಮಾಸ್ಟರ್‌ ಉದ್ದಬೆಟ್ಟು, ಸದಸ್ಯರಾಗಿ ಫಾರೂಖ್‌ ನುàಮಿ ಸರಳಿಕಟ್ಟೆ, ಅಬೂಬಕರ್‌ ಮುಸ್ಲಿಯಾರ್‌ ಉದ್ದಬೆಟ್ಟು, ಸಾರ್ವಜನಿಕ ಸಂಪರ್ಕ ವಭಾಗದ ಅಧ್ಯಕ್ಷರಾಗಿ ಅಬ್ದುಸ್ಸಮದ್‌ ಕೊಡಗು, ಕಾರ್ಯದರ್ಶಿಯಾಗಿ ಇಕ್ಬಾಲ್‌ ಕುಪ್ಪೆಪದವು, ವಿಭಾಗದ ಸದಸ್ಯರಾಗಿ ತಾಜುದ್ದೀನ್‌ ಸುಳ್ಯ, ರಝಾಕ್‌ ಉಳ್ಳಾಲ್‌, ಅಯ್ಯೂಬ್‌ ಅಳದಂಗಡಿ, ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಆಸಿಫ್‌ ಬದ್ಯಾರ್‌, ಕಾರ್ಯದರ್ಶಿಯಾಗಿ ಝಕರಿಯ ಕೊಡಗು, ವಿಭಾಗದ ಸದಸ್ಯರಾಗಿ ನಿಯಾಝ್ ಕಾಟಿಪಳ್ಳ, ಇಕ್ಬಾಲ್‌, ಸಿದ್ದೀಕ್‌ ಕನ್ಯಾನ ಆಯ್ಕೆಯಾದರು.

ಸಲಹಾ ಸಮಿತಿಯ ಅಧ್ಯಕ್ಷರಾಗಿ ಹಂಝ ಮುಸ್ಲಿಯಾರ್‌ ಕಣ್ಣೂರು, ಕಾರ್ಯದರ್ಶಿಯಾಗಿ  ಜಬ್ಟಾರ್‌ ಕಾವಳಕಟ್ಟೆ, ವಿಭಾಗದ ಸದಸ್ಯರಾಗಿ ಇಸ್ಮಾಯಿಲ್‌ ಅಲ್‌ ಮರೈ, ಇಸ್ಮಾಯಿಲ್‌ ಉಳ್ಳಾಲ, ಸುಲೈಮಾನ್‌ ತರ್ಕಳಿಕೆ, ಸಂಕೇತ ವಿಭಾಗದ ಅಧ್ಯಕ್ಷರಾಗಿ ಉಮರ್‌ ಗೇರುಕಟ್ಟೆ, ಕಾರ್ಯದರ್ಶಿಯಾಗಿ  ರಝಾಕ್‌ ಉಳ್ಳಾಲ್‌, ವಿಭಾಗದ ಸದಸ್ಯರಾಗಿ ಅಶ್ರಫ್‌ ಸಂಗಮ್‌, ಉಮರ್‌ ಕೊಡಗು, ಕಚೇರಿ ವಿಭಾಗದ  ಅಧ್ಯಕ್ಷರಾಗಿ  ಇಬ್ರಾಹಿಂ ಮದನಿ ಕಡಬ, ಕಾರ್ಯದರ್ಶಿಯಾಗಿ  ನಝೀರ್‌ ನೆಕ್ಕಿಲ್‌, ವಿಭಾಗದ ಸದಸ್ಯರಾಗಿ ಅಶ್ರಫ್‌ ಮಠ, ಶರೀಫ್‌ ಕಬಕ, ಹುಸೈನ್‌ ಎಂ. ಎ, ಇತರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಮೀದ್‌ ಬೊಳ್ವಾಯಿ, ಶಾಕಿರ್‌ ಅಳಕೆಮಜಲು,  ಫಿದೌìಸ್‌ ಕೊಡಗು, ಅರಾಫತ್‌ ಉಳ್ಳಾಲ, ಫಕ್ರುದ್ದೀನ್‌ ರಾಝಿ,  ನೌಶಾದ್‌ ಪಡಿಕ್ಕಲ್‌, ಮುಸ್ತಫಾ ತುಂಬಿದಡ್ಕ ಹಾಗೂ ಕೆ.ಸಿ.ಫ್‌ ಮದೀನಾ ಸೆಕ್ಟರ್‌ನ ರಾಷ್ಟ್ರೀಯ ನಾಯಕರಾದ ಅಶ್ರಫ್‌ ಕಿನ್ಯ ಅವರನ್ನು ಆಯ್ಕೆ ಮಾಡಲಾಯಿತು. ಉಮರ್‌ ಗೇರುಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next