Advertisement
31 ವರ್ಷದ ಲಾ ಕ್ರೂಜ್ ಶುಕ್ರವಾರ ನಡೆದ ಹೆವಿವೇಟ್ ವಿಭಾಗದ ಫೈನಲ್ ಕಾದಾಟದಲ್ಲಿ 5-0 ಅಂತರದಿಂದ ರಶ್ಯದ ಮುಸ್ಲಿಮ್ ಗಾಜಿಮಗೊಡೇವ್ ಅವರನ್ನು ಪರಾಭವಗೊಳಿಸಿದರು.
2014ರಲ್ಲಿ ಸಶಸ್ತ್ರ ದರೋಡೆಕೋರರು ಲಾ ಕ್ರೂಜ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅವರ ದೇಹದ ಹಿಂಭಾಗಕ್ಕೆ ಗುಂಡು ತಾಗಿದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ನಡೆದ ಎರಡು ವರ್ಷಗಳ ಬಳಿಕ ರಿಯೋ ಒಲಿಂಪಿಕ್ಸ್ ನಲ್ಲಿ ಅವರಿಗೆ ಚಿನ್ನದ ಪದಕ ಒಲಿದಿತ್ತು. ಇದೀಗ ಮತ್ತೆ ಟೋಕಿಯೋದಲ್ಲೂ ಚಿನ್ನ ಗೆದಿದ್ದಾರೆ. “ಅಂದಿನ ಘಟನೆಯ ಆಘಾತದಿಂದ ಬೇಗನೆ ಹೊರಬರಲು ಸಾಧ್ಯವಾಗಿರಲಿಲ್ಲ. ಅದು ಅತ್ಯಂತ ಕಷ್ಟದ ಸಮಯವಾಗಿತ್ತು. ಆದರೆ ನಾನು ವಿಶ್ವಾಸ ಕಳೆದುಕೊಳ್ಳಲಿಲ್ಲ. ನನ್ನ ಈ ಸಾಧನೆಗೆ ಅಂದು ವೈದ್ಯರು ನೀಡಿದ ಶ್ರೇಷ್ಠ ಚಿಕಿತ್ಸೆಯೇ ಮುಖ್ಯಕಾರಣ’ ಎಂದು ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಕೂಡ ಆಗಿರುವ ಕ್ರೂಜ್ ನುಡಿದರು.