Advertisement

“ಸ್ಟ್ರಾಂಗ್‌ ಸಿಎಂ’ ಸಿದ್ದರಾಮಯ್ಯಗೆ ಸಿ.ಟಿ. ರವಿ ಟಾಂಗ್‌

11:31 PM Mar 20, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಅವರು ತಮ್ಮನ್ನು ತಾವು ಸ್ಟ್ರಾಂಗ್‌ ಎಂದುಕೊಂಡು ಹೇಳಿಕೊಳ್ಳುವ ಪರಿಸ್ಥಿತಿ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು, ನಮ್ಮ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ, ಇಡೀ ದೇಶದ ಜನತೆ ಸ್ಟ್ರಾಂಗ್‌ ಎನ್ನುತ್ತಿದ್ದಾರೆ. ವಿದೇಶಿ ನಾಯಕರೂ ಮೋದಿ ಅವರನ್ನು ಸ್ಟ್ರಾಂಗ್‌ ಲೀಡರ್‌ ಎಂದು ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಟೀಕಿಸಿದರು.

Advertisement

ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಟ್ವೀಟ್‌ಗೆ ತಿರುಗೇಟು ನೀಡಿದ ಅವರು, ಈಗಾಗಲೇ ಸಿಎಂ ಸುತ್ತ ಶ್ಯಾಡೋ ಸಿಎಂ, ಸೂಪರ್‌ ಸಿಎಂಗಳಿದ್ದಾರೆ. ದಲಿತ ಸಿಎಂ ಕೂಗು ಕೇಳಿಬಂದಿದೆ. ಅವರ ಮೇಲೆ ವಿಶ್ವಾಸ ಹೋಗಿದೆ. ಐದು ವರ್ಷ ಸಿಎಂ ಆಗಿರುವ ಖಾತರಿ ಸಿದ್ದರಾಮಯ್ಯ ಅವರಿಗಿಲ್ಲ. ಹೀಗಾಗಿ ಪದೇಪದೆ ತಮ್ಮನ್ನು ತಾವು ಸ್ಟ್ರಾಂಗ್‌ ಎಂದು ಹೇಳಿಕೊಳ್ಳುವ ಅಥವಾ ಹೇಳಿಸಿಕೊಳ್ಳುವ ಪರಿಸ್ಥಿತಿ ಎಂದರು.

ಎಷ್ಟೇ ಅವಕಾಶ ಸಿಕ್ಕರೂ ಸ್ಟ್ರಾಂಗ್‌ ಆಗದ ರಾಹುಲ್‌ ಗಾಂಧಿಯನ್ನು ದುರ್ಬಲ ನಾಯಕ ಎಂದು ಹೇಳುವ ಧೈರ್ಯ ಸಿಎಂ ಸಿದ್ದರಾಮಯ್ಯಗೆ ಬರಲಿಲ್ಲ. ಇಡೀ ಜಗತ್ತೇ ಸ್ಟ್ರಾಂಗ್‌ ಲೀಡರ್‌ ಎಂದು ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೀಕ್‌ ಎನ್ನುವ ಇವರೆಷ್ಟು ಸ್ಟ್ರಾಂಗ್‌ ಎಂಬುದನ್ನು ಅವರ ಪಕ್ಷದವರೇ ಪ್ರಮಾಣೀಕರಿಸಿದ್ದಾರೆ ಎಂದು ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌, ವಕ್ತಾರರಾದ ಪ್ರಕಾಶ್‌, ಮೋಹನ್‌ ವಿಶ್ವ ಭಾಗವಹಿಸಿದ್ದರು.

ಅಸಮಾಧಾನ ಶೀಘ್ರ ಶಮನ
ಈ ಹಿಂದೆ ಬಿಜೆಪಿ, ಜನಸಂಘದ ಅಭ್ಯರ್ಥಿ ಆಯ್ಕೆಯಾದರೂ ಸುದ್ದಿ ಆಗುತ್ತಿರಲಿಲ್ಲ. ಈಗ ಸಂಘಟನಾತ್ಮಕ ಪಕ್ಷವಷ್ಟೇ ಅಲ್ಲದೆ, ಸಮೂಹದ ಪಕ್ಷವಾಗಿ ಬೆಳೆದಿದೆ. ಹೀಗಾಗಿ ಪೈಪೋಟಿಯೂ ಇದೆ, ಅಸಮಾಧಾನವೂ ಕಾಣುತ್ತಿದೆ. ಆದರೆ, ಎಲ್ಲ ಅಸಮಾಧಾನಗಳೂ ಶೀಘ್ರ ಶಮನವಾಗಲಿವೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಕಲಬುರಗಿಯಲ್ಲಿ ಮೋದಿ ಸಭೆ ವೇಳೆ ಜೆಡಿಎಸ್‌ನವರಿಗೆ ವೇದಿಕೆ ಸಿಕ್ಕಿರಲಿಲ್ಲ. ಶಿವಮೊಗ್ಗದಲ್ಲಿ ಜೆಡಿಎಸ್‌ ನಾಯಕರೂ ವೇದಿಕೆಯಲ್ಲಿದ್ದರು. ಎಲ್ಲೆಡೆ ಜೆಡಿಎಸ್‌ನವರನ್ನೂ ಜೋಡಿಸಿಕೊಳ್ಳುವ ಕೆಲಸ ಆಗುತ್ತಿದೆ. ಎಲ್ಲಿಯೂ ಅಸಮಾಧಾನಗಳಿಲ್ಲ.ನಮ್ಮ ಪಕ್ಷವೀಗ ಸಂಘಟನಾತ್ಮಕವಾಗಿಯಷ್ಟೇ ಉಳಿದಿಲ್ಲ. ಸಮೂಹದ ಪಕ್ಷವಾಗಿ ಬೆಳೆದಿದೆ ಎಂದರು. ನಾನು ಬೆಂಗಳೂರು ಉತ್ತರ ಅಥವಾ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳ ಟಿಕೆಟ್‌ ಕೇಳಿರಲಿಲ್ಲ. ಬೇಡ ಎಂದೂ ಹೇಳಿರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next