ಬೆಂಗಳೂರು: ಬಿಜೆಪಿ ನಾಯಕರನ್ನು ಸೀಳುನಾಯಿಗಳು ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿದ ಪಕ್ಷಗಳ ಬಗ್ಗೆ ಇರುವ ಭಾವನೆಯನ್ನು ಶಬ್ದಗಳ ಮೂಲಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಯಾರೂ ಪ್ರಶ್ನೆ ಮಾಡಬಾರದು ಎಂದಾದರೆ ಅದು ಸರ್ವಾಧಿಕಾರಿ ಧೋರಣೆ. ಅವರಿಗೆ ತಿರುಗೇಟು ಕೊಡಬಾರದು ಎಂದರೇ ಅವರು ಹೇಳಿದ್ದು ವೇದ ವಾಕ್ಯ ಎಂದು ಭಾವಿಸಬೇಕಾ? ಪ್ರಜಾಪ್ರಭುತ್ವದಲ್ಲಿ ಚರ್ಚೆಯೇ ತಾಕತ್ತು. ಇದು ಅವರ ಕೆಟ್ಟ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದ್ದು, ಅದಕ್ಕೆ ಧಿಕ್ಕಾರವಿದೆ ಎಂದು ಹೇಳಿದರು.