Advertisement

ಜೆಡಿಎಸ್‌ಗೆ ಮೋದಿ ,ಅಮಿತ್ ಶಾ ವಿಚಾರ ಬಂದಾಗ ಮಾತ್ರ ಹಿಂದಿ ವಿರೋಧ ನೆನೆಪಾಗುತ್ತದೆ: ಸಿಟಿ ರವಿ

12:57 PM Sep 14, 2022 | Team Udayavani |

ಬೆಂಗಳೂರು: 1949ರಲ್ಲಿ ಕೇಂದ್ರದಲ್ಲಿ ಅಮಿತ್ ಶಾ ಇದ್ರಾ? ಅವತ್ತು ನೆಹರು,ಪಟೇಲರು ಅಧಿಕಾರದಲ್ಲಿದ್ದರು. ಸಂಪರ್ಕ ಭಾಷೆ ಹಿಂದಿ ಮಾಡಿದ್ದು ಅಮಿತ್ ಶಾನಾ 1996 ರಲ್ಲಿ ದೇವೆಗೌಡರು ಪ್ರಧಾನಿಯಾಗಿದ್ದಾಗ ಹಿಂದಿ ದಿವಸ್ ಆಚರಣೆ ಮಾಡಿಲ್ವಾ? ಜನತಾ ಸಮೂಹದ ನಾಯಕರು ಬೆಂಗಳೂರಿಗೆ ಬಂದಾಗ ಬೃಹತ್ ಸಮಾವೇಶ ನಡೆಸಿ ಹಿಂದಿಯಲ್ಲೇ ಭಾಷಣ ಮಾಡಿದ್ದರು. 1990 ರಲ್ಲಿ ಇದ್ದ ರಾಜಕಾರಣ ಯಾಕೆ ಈಗ ಇಲ್ಲ. ನಾವು ಎಲ್ಲ ಭಾಷೆಗಳಿಗೂ ಸಮಾನ ಗೌರವ,ಸಮಾನ ಅವಕಾಶ ಕೊಡಲಾಗಿದೆ ಎನ್‌ ಇಪಿ ಮೂಲಕ ಎಲ್ಲಾ ಭಾಷೆ ಕಲಿಯಲು ಅವಕಾಶ ಮಾಡಿಕೊಡಲಾಗಿದೆ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದರು.

Advertisement

ಇದನ್ನೂ ಓದಿ: ಕಾಂಗ್ರೆಸ್ ಛೋಡೋ, ಬಿಜೆಪಿ ಕೋ ಜೋಡೋ : ಗೋವಾದಲ್ಲಿ 8 ಕೈ ಶಾಸಕರು ಬಿಜೆಪಿ ತೆಕ್ಕೆಗೆ !

ಹಿಂದಿ ದಿವಸ್ ವಿರುದ್ದ ಜೆಡಿಎಸ್‌ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭಾರತೀಯತೆ ಅಂದರೆ ಕೇವಲ ಹಿಂದಿ ಅಲ್ಲ.ಎಲ್ಲ ಭಾಷೆಗಳನ್ನು ಒಳಗೊಳ್ಳುವುದು ಭಾರತೀಯತೆ ಜೆಡಿಎಸ್‌ನವರಿಗೆ ಮೋದಿ ಅಮಿತ್ ಶಾ ವಿಚಾರ ಬಂದಾಗ ಮಾತ್ರ ಹಿಂದಿ ವಿರೋಧ ನೆನೆಪಾಗುತ್ತದೆ. ಕೇಂದ್ರ ಸರ್ಕಾರ ಯಾರ ಮೇಲಾದ್ರೂ ಹಿಂದಿ ಹೇರಿದ್ದಾರಾ? ಎಲ್ಲರೂ ಕನ್ನಡ ಮಾತನಾಡುತ್ತಾರೆ. ಪಾರ್ಲಿಮೆಂಟ್‌ನಲ್ಲಿ ಕನ್ನಡ ಮಾತನಾಡಲು ಅವಕಾಶ ಇದೆ. ದೆಹಲಿಯಲ್ಲೂ ಕನ್ನಡ ರಾಜ್ಯೋತ್ಸವ ಮಾಡುತ್ತೀವಿ. ಬೇರೆ ರಾಜ್ಯದ ಉತ್ಸವಗಳನ್ನು ಮಾಡುತ್ತೀವಿ. ಭಾರತ ತೇರೆ ತುಕ್ಡೆ ಹೋಂಗೆ ಎನ್ನುವ ರೀತಿ ಮಾಡಲ್ಲ ಎಂದರು.

ಸಿಟಿ ರವಿ ವಿರುದ್ದ ಸಿಎಂ ಇಬ್ರಾಹಿಂ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪುವನ್ನು ಆರಾಧಿಸುವವರು ಕನ್ನಡದ ವಿರೋಧಿಗಳು. ಅಂತವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ತಾಯಿ,ಅಜ್ಜಿ ಎಲ್ಲರೂ ಕನ್ನಡಿಗರೇ ನಾನು ಕನ್ನಡವನ್ನೆ ಮಾತನಾಡ್ತೀನಿ. ಕನ್ನಡದಲ್ಲೇ ಬೈತೀನಿ ಎಂದು ಹೇಳಿದರು.

ಯಾರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೂ, ತೆರವು ಮಾಡುತ್ತೇವೆ. ಅಂತ ಸಿಎಂ ಸದನದಲ್ಲೇ ಹೇಳಿದ್ದಾರೆ ಎಂದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next