Advertisement

ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದು: ಡಿಕೆಶಿ ಕಣ್ಣೀರಿಗೆ ಸಿಟಿ ರವಿ ವ್ಯಂಗ್ಯ

02:07 PM Oct 02, 2022 | Team Udayavani |

ಚಿಕ್ಕಮಗಳೂರು :  ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರಿಟ್ಟಿದ್ದಾರೆ. ಡಿಕೆಶಿ ಒಳಗಡೆ ಇಂತಹ ಕಲಾವಿದ ಇದ್ದನೆಂದು ನಾನು ಅಂದುಕೊಂಡಿರಲಿಲ್ಲ. ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು. ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ ಬಣ್ಣ ಹಾಕದೇ, ಗ್ಲಿಸರಿನ್ ಹಾಕದೇ ಕಣ್ಣೀರು ಹಾಕುವ ನಟನೆ ಅವರಿಗೆ ಒಲಿದು ಬಂದಿದೆ. ಈ ನಟನೆ ಡಿ.ಕೆ.ಶಿವಕುಮಾರ್ ಅವರಿಗೆ ಬೈ ಬರ್ತ್ ಬಂದಿದೆ. ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದು ಬಿಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಹೀರೋ ಆಗುವ ವಯಸ್ಸು ಮುಗಿದು ಹೋಗಿದೆ. ವಿಲನ್ ಆಗೋಕೂ ತಾಕತ್ತು ಇಲ್ಲದಂತಾಗಿದೆ. ಆದರೆ, ಪ್ರಯತ್ನಪಟ್ಟರೆ ನಟನಾಗೋಕೆ ಪೋಷಕ ಪಾತ್ರಗಳು ಸಿಗುತ್ತದೆ. ಇನ್ನು ಮುಂದೆ ಪ್ರಶಸ್ತಿ ಏನಿದ್ರೂ ಡಿಕೆಶಿ ಪಾಲಿಗೆ. ಈ ರೀತಿಯ ಕಮೆಂಟ್ ಗಳನ್ನು ನಾನು ನೋಡಿದ್ದೇನೆ ಎಂದರು.

ಡಿಕಶಿಗೆ ಲೇಟಾಗಿದೆ, ಆದ್ರೂ ಕೂಡ ಕಡೆ ಅವಕಾಶ ಸಿಕ್ಕರೂ ಸಿಗಬಹುದು. ಸಿನಿಮಾದಲ್ಲಿ ನಟಿಸಲು ಡಿಕೆ ಶಿವಕುಮಾರ್ ಟ್ರೈ ಮಾಡೋದು ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next