Advertisement

ಕಾಂಗ್ರೆಸ್‌ ನಾಯಕರಿಗೆ ಸಿ.ಟಿ. ರವಿ ಪಂಚ ಪ್ರಶ್ನೆ

08:05 PM Jun 16, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.

Advertisement

ಗುರುವಾರ ಮಾಧ್ಯಮಗಳ ಮೂಲಕ ಕಾಂಗ್ರೆಸ್‌ಗೆ ಪ್ರಶ್ನೆ ಹಾಕಿರುವ ಅವರು, ಸೋನಿಯಾ ಹಾಗೂ ರಾಹುಲ್‌ ಕುಟುಂಬ ಕಾನೂನಿಗೆ ಅತೀತರೇ? ಕಾನೂನಿಗೆ ಅತೀತರಾಗಿದ್ರೆ ಸಂವಿಧಾನದ ಯಾವ ಅಡಿಯಲ್ಲಿ ಪ್ರಾತಿನಿಧ್ಯ ನೀಡಿದೆ? ಅಸೋಸಿಯೇಶನ್‌ ಜನರಲ್‌ನಲ್ಲಿರೋ ಮೂಲ ಷೇರುದಾರರು ಎಷ್ಟು? ಯಂಗ್‌ ಇಂಡಿಯಾದಲ್ಲಿರೋ ಪಾಲುದಾರರು ಎಷ್ಟು.? ಅಲ್ಲಿ ಷೇರುದಾರರು, ಇಲ್ಲಿ ಪಾರುದಾರರು ಎಷ್ಟು ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಎಡಬಿಡಂಗಿ :

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಕೀಲರು ಹಾಗೂ ಸಿಎಂ ಆಗಿದ್ದವರು. ಆದರೂ ಅವರು ಎಡಬಿಡಂಗಿತನ ತೋರಿಸುತ್ತಿದ್ದಾರೆ. ಅವರು ರಾಮಾಯಣ, ಮಹಾಭಾರತ ಓದುವ ಬದಲು ಲೆನಿನ್‌, ಮಾರ್ಕ್ಸ್ ಬಗ್ಗೆ ಓದಿರುವುದೇ ಇದಕ್ಕೆ ಕಾರಣ ಎಂದು  ರವಿ ವ್ಯಂಗ್ಯವಾಡಿದರು.

ದೇವನೊನಬ್ಬ ನಾಮ ಹಲವು ಅನ್ನುವ ತತ್ವ ನಮ್ಮದು. ದೇವರನ್ನು ಯಾವ ರೀತಿಯಲ್ಲಾದರೂ ಪೂಜಿಸಬಹುದು ಎಂಬುದು ಸನಾತನ ಧರ್ಮದ ಮೂಲ ತಿರುಳು. ರಾಮ, ಶಿವ, ಕೃಷ್ಣ ಎಲ್ಲರೂ ಶೂದ್ರ ದೇವರು. ಅವರೆಲ್ಲ ಇಂದ್ರನ ವಿರುದ್ಧ ಬಂಡಾಯ ಎದ್ದವರು ಅಂತ ಹೇಳಿದ್ದಾರೆ. ಅದನ್ನು ಯಾವ ಪುಸ್ತಕದಲ್ಲಿ ಓದಿದ್ದಾರೊ ಗೊತ್ತಿಲ್ಲ.  ಪಾಪ ಅವರಿಗೆ ಗೊತ್ತಿಲ್ಲ, ಇಂದ್ರನೂ ಶಾಪಗ್ರಸ್ತನಾದಾಗ ಶಿವನ ಕುರಿತು ತಪಸ್ಸು ಮಾಡುತ್ತಾನೆ ಎಂದು ರವಿ ಹೇಳಿದರು.

Advertisement

ಎಜೆಎಲ್‌ ಆರಂಭವಾದಾಗ ಐದೂವರೆ ಸಾವಿರ ಷೇರುದಾರರಿದ್ದರು. ಯಂಗ್‌ ಇಂಡಿಯಾಗೆ ವರ್ಗಾವಣೆ ಮಾಡುವಾಗ 1,500 ಷೇರುದಾರರಾಗಿದ್ದಾರೆ. ಇಲ್ಲಿ ವರ್ಗಾವಣೆ ಆದಾಗ ನಾಲ್ವರು ಪಾಲುದಾರರಿ¨ªಾರೆ. ಸೋನಿಯಾ ಶೇ. 38, ರಾಹುಲ್‌ ಶೇ. 38, ಮೋತಿಲಾಲ್‌ ಓರಾ ಹಾಗೂ ಆಸ್ಕರ್‌ ಫೆರ್ನಾಂಡಿಸ್‌ ಇದ್ದಾರೆ. ಪ್ರೈವೆಟ್‌ ಕಂಪೆನಿಗೆ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅಧಿಕಾರವಿದೆಯೇ?  ವರ್ಗಾವಣೆ ಮಾಡಲು ಮೂಲ ಶೇರುದಾರರ ಅನುಮತಿ ಇದೆಯೇ? ಒಂದು ಕಂಪೆನಿಯಿಂದ ಮತ್ತೂಂದು ಕಂಪೆನಿಗೆ ವರ್ಗಾವಣೆ ಮಾಡುವಾಗ ಎಜೆಎಲ್‌ ಕಂಪೆನಿಯ ಸಾಲ ಎಷ್ಟಿತ್ತು? ಆಸ್ತಿಯ ಪ್ರಮಾಣ ಇವತ್ತಿನ ಮಾರುಕಟ್ಟೆ ದರ ಅಲ್ಲ. ಸಬ್‌ ರಿಜಿಸ್ಟ್ರಾರ್‌ ಮೌಲ್ಯ 2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿ, ಕೇವಲ 50 ಲಕ್ಷಕ್ಕೆ ವರ್ಗಾವಣೆ ಮಾಡಿರೋದು ಅಕ್ರಮ ಅಲ್ವಾ.? ಯಂಗ್‌ ಇಂಡಿಯಾ ಕಂಪನಿ ಈಗ ಯಾವ ವಹಿವಾಟು ನಡೆಸುತ್ತಿದೆ. ಕಾಂಗ್ರೆಸ್‌ನವರು ಪಂಚ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ಎಂದು ಭಾವಿಸಿರುವುದಾಗಿ ತಿಳಿಸಿದರು.

ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಭಯಭೀತರಾಗಿ¨ªಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಅವರನ್ನು ಟಾರ್ಗೆಟ್‌ ಮಾಡುವ ಅವಶ್ಯಕತೆ ಏನಿದೆ. ನಿಮ್ಮ ನಾಯಕರು ಕಾಲಿಟ್ಟ ಕಡೆಯರೆಲ್ಲ ನಿಮ್ಮ ಪಕ್ಷ ಸೋತಿದೆ. ನಾವೇಕೆ ಟಾರ್ಗೆಟ್‌ ಮಾಡಬೇಕು.? ಯು.ಪಿ ಚುನಾವಣೆಯಲ್ಲಿ 399 ಕ್ಷೇತ್ರದಲ್ಲಿ ಸ್ಪರ್ಧಿಸಿ, 387 ಸ್ಥಾನದಲ್ಲಿ ಠೇವಣಿ ಕಳೆದುಕೊಂಡಿದೆ.   ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಮೋರೆ ಹೋಗಿದ್ದರು, ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಹೀಗಿದ್ದಾಗ ಟಾರ್ಗೆಟ್‌ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಗಾಳಿಗೆ ಅದಿದೇವತೆಯಾಗಿ ವಾಯು, ನೀರಿಗೆ ಗಂಗಾ ಮಾತೆ. ದೇವಾನು ದೇವತೆಗಳಿಗೆ ಪ್ರಕೃತಿ ಹೆಸರಿಟ್ಟು ಪೂಜಿಸುವವರು ನಾವು. ಇಂದ್ರ ಕೂಡ ಪ್ರಾಕೃತಿಕ ದೇವರು. ರಾಮ ಸಂಕಷ್ಟದಲ್ಲಿದ್ದಾಗ, ರಾವಣನ ಜೊತೆ ಯುದ್ದ ಮಾಡುವಾಗ ಶಿವನ ಪೂಜೆ ಮಾಡುತ್ತಾನೆ. ರಾಮೇಶ್ವರದಲ್ಲಿ  ಶಿವಲಿಂಗ ಇದೆ. ರಾಮೇಶ್ವರದಲ್ಲಿ ಶಿವನ ಪೂಜೆ ಮಾಡುತ್ತೇನೆ. ಗೋಕರ್ಣದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆ. ಅದು ಗಣೇಶ ಮೂರು ಬಾರಿ ಎಣಿಸಿ ನೆಲಕ್ಕೆ ಇಡುತ್ತಾನೆ. ಅದು ಗೋಕರ್ಣ. ಇಲ್ಲೆಲ್ಲೂ ಇಂದ್ರ ಮತ್ತು ಶಿವ, ಇಂದ್ರ ಮತ್ತು ರಾಮನ ಸಂಘರ್ಷ ಇಲ್ಲ. ಇವರ ಯಾವ ಥಿಯರಿಯಲ್ಲಿ ಸಂಘರ್ಷ ಇದೆ ಎಂದು ಪ್ರಶ್ನಿಸಿದರು.

ರಾಹುಲ್‌ ಗಾಂಧಿಯನ್ನು ಕೌಲ್‌ ಬ್ರಾಹ್ಮಣ ಅಂತ ಕರೆದಿದ್ದಾರೆ. ಅದು ಹೇಗೆ ಗೊತ್ತಿಲ್ಲ. ನಮ್ಮ ಪ್ರಕಾರ ಇಂದಿರಾ ಗಾಂಧಿ ಪಾರ್ಸಿಯನ್ನ ಮದುವೆಯಾಗಿದ್ದು. ಪಾರ್ಸಿಯ ಗ್ಯಾಂಡಿ ಅವರು. ಕೌಲ್‌ ಬ್ರಾಹ್ಮಣ ಅಂತಿದ್ದಾರೆ, ಅದು ಸುಳ್ಳು. ಒಂದು ವೇಳೆ ಕೌಲ್‌ ಬ್ರಾಹ್ಮಣ ಅನ್ನುವುದು ಸರಿಯಾಗಿದ್ದರೆ ಸಿದ್ದರಾಮಯ್ಯ ಯಾರ ಗುಲಾಮರಾಗಿದ್ದಾರೆ ಎಂದು ಸಿ.ಟಿ. ರವಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next