Advertisement

ಕುಮಾರಸ್ವಾಮಿಯದ್ದು ಮನೆ-ಊರು ದಾಟಿದ ಸಾಮರ್ಥ್ಯ: ಸಿ.ಟಿ.ರವಿ ಟಾಂಗ್

03:14 PM Feb 07, 2023 | Team Udayavani |

ಚಿಕ್ಕಮಗಳೂರು: ನಪುಂಸಕ‌ ರಾಜ್ಯ ಬಿಜೆಪಿ ಸರ್ಕಾರ ಎಂದು ಟೀಕೆ ಮಾಡಿದ ಎಚ್ ಡಿ ಕುಮಾರಸ್ವಾಮಿಯವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದು, “ಅವರಷ್ಟು ಸಾಮರ್ಥ್ಯವಿಲ್ಲ ಎಂದು ನಾವು ಮೊದಲೇ ಒಪ್ಪಿಕೊಂಡಿದ್ದೇವೆ. ನಮ್ಮದ್ದು ಮನೆಯೊಳಗಿನ ಸಾಮರ್ಥ್ಯ, ಅವರದ್ದು ಮನೆ-ಊರು ದಾಟಿದ ಸಾಮರ್ಥ್ಯ, ನಮಗೆ ಅಷ್ಟು ಸಾಮರ್ಥ್ಯವಿಲ್ಲ” ಎಂದಿದ್ದಾರೆ.

Advertisement

ಅವರು ವೈಯಕ್ತಿಕವಾಗಿ ಹೇಳಿದ್ದಾರೆಯೋ ಅಥವಾ ರಾಜಕೀಯವಾಗಿ ಹೇಳಿದ್ದಾರೋ ಗೊತ್ತಿಲ್ಲ. ರಾಜಕೀಯವಾಗಿ ಹೇಳಿದ್ದರೆ ಬಿಜೆಪಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತಲೇ ಬಂದಿದೆ ಎಂದರು.

ಸಿಎಂ ಆಗಿದ್ದಾಗ ಜೆಡಿಎಸ್ ಭದ್ರಕೋಟೆಯಲ್ಲೇ ನೂರಾರು ಕೋಟಿ ಖರ್ಚು ಮಾಡಿ ಮಗನನ್ನ ಗೆಲ್ಲಿಸಲಾಗಲಿಲ್ಲ. ದೇವೇಗೌಡರು ಹಿರಿಯರು, ಗೌರವವಿದೆ. ಇಳಿವಯಸ್ಸಲ್ಲಿ ಕಾಂಗ್ರೆಸ್-ಜೆಡಿಎಸ್ ಸೇರಿ ಗೆಲ್ಲಿಸಲು ಆಗಲಿಲ್ಲ, ಏನು ಹೇಳಬೇಕು. ವೈಯಕ್ತಿಕವಾಗಿ ಹೇಳಿದ್ದರೆ ಅವರಷ್ಟು ಸಾಮಥ್ಯವಿಲ್ಲ ಎಂದು ಒಪ್ಪಿಕೊಂಡಿದ್ದೇವೆ ಎಂದರು.

ನಮ್ಮದು ಸೀಮಿತ ಚೌಕಟ್ಟಿನ ಸಾಮರ್ಥ್ಯ, ಅವರ ಸಾಮರ್ಥ್ಯಕ್ಕೆ ನಾವು ಶರಣು ಶರಣಾರ್ಥಿ ಎಂದು ಸಿ.ಟಿ.ರವಿ ಹೇಳಿದರು.

ಪ್ರಹ್ಲಾದ್ ಜೋಶಿಯನ್ನ ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಹೇಳಿಕೆ ತಿರುಗೇಟು ನೀಡಿದ ಅವರು, ಬಿಜೆಪಿಯಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಮಾನ್ಯ ಕಾರ್ಯಕರ್ತ ಕೂಡ ಸಿಎಂ ಆಗಬಹುದು. ಅದೇ ಪರಿಸ್ಥಿತಿ ಜನತಾದಳದಲ್ಲಿ ಇದೆಯೇ ಎಂದು ಪ್ರಶ್ನಿಸಿದರು.

Advertisement

ಇದನ್ನೂ ಓದಿ:ಹೀಗೊಬ್ಬ ಆಹಾರ ಪ್ರೇಮಿ; ರಾಜ್ಮಾ ಚಾವಲ್ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ

ಜೆಡಿಎಸ್‍ ನಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿ ಕೊಡಲು ಸಾಧ್ಯವಿದೆಯೇ? ಹಾಸನ ಜಗಳ ನಿಮಗೆ ಗೊತ್ತು, ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತರು ಅಂದರೆ ಯಾರು? ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿಯೇ ಸಾಮಾನ್ಯ ಕಾರ್ಯಕರ್ತ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಯಾವ ಸ್ಥಾನಕ್ಕೆ ಬೇಕಾದರೂ ಏರಬಹುದು. ನಾನು ಪೋಸ್ಟರ್ ಹೊಡೆದು, ಮೈಕ್ ಅನೌನ್ಸ್ ಮಾಡಿ ಫ್ಲಾಗ್ ಕಟ್ಟಿದ್ದೇನೆ. ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ನಾವು ದೊಡ್ಡ ರಾಜಕೀಯ ಹಿನ್ನೆಲೆಯವರಲ್ಲ, ಅದೇ ರೀತಿ ಪ್ರಹ್ಲಾದ್ ಜೋಶಿಯವರು ಕೂಡ, ಪ್ರಧಾನಿ ಕೂಡ ಸಾಮಾನ್ಯ ಕಾರ್ಯಕರ್ತ ಎಂದು ಸಿ.ಟಿ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next