Advertisement

ಸ್ವಂತ ಹಿತವನ್ನು ರಾಜ್ಯದ ಹಿತ ಎಂದು ಬಯಸಿದರೆ.. ಸಿಟಿ ರವಿ ಟಾಂಗ್ ಕೊಟ್ಟದ್ದು ಯಾರಿಗೆ ?

02:55 PM May 15, 2022 | Team Udayavani |

ನೆಲಮಂಗಲ:  ಜನಹಿತವೇ ಆಧಾರವಿರುವ ವ್ಯಕ್ತಿಗಳು, ಪಕ್ಷಗಳು, ಅವರಿಂದ ದೇಶಕ್ಕೆ ರಾಜ್ಯಕ್ಕೆ ಒಳಿತಾಗುತ್ತದೆ. ಸ್ವಂತ ಹಿತವನ್ನು ರಾಜ್ಯದ ಹಿತ ಎಂದು ಬಯಸಿದರೆ ಜನ ಒಪ್ಪುತ್ತಾರ ಕಾದು ನೋಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಎಂಬ ಮಾತಿಗೆ ಟಾಂಗ್ ಕೊಟ್ಟರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮಾರ್ಪಾಡು ಮಾಡಲಿಲ್ಲ ಅಂದರೆ ಈ ಹಿಂದೆ ಇದ್ದ ಮೀಸಲಾತಿ ಆಧರಿಸಿ ಚುನಾವಣೆ ಮಾಡಿ, ಹೊಸ ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ ಕೊಡುತ್ತೇವೆ ಅದಕ್ಕೆ ಅನುಮತಿ ನೀಡಿ. ಎರಡರಲ್ಲಿ ಒಂದಕ್ಕೆ ಅನುಮತಿ ಕೊಡುತ್ತಾರೆ ಎಂಬ ನಂಬಿಕೆ ಇದೆ ನಮ್ಮ ಪಕ್ಷ ಬದ್ದವಾಗಿದೆ ಈಗಿರುವ ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ ಕೊಟ್ಟು ಚುನಾವಣೆ ಎದರಿಸುತ್ತೇವೆ ಎಂದರು.

ಸಚಿವ ಸಂಪುಟದಲ್ಲಿ ಹೊಸ ಮುಖ ಸೇರ್ಪಡೆ ವಿಚಾರವನ್ನು ಮುಖ್ಯಮಂತ್ರಿಯವರನ್ನು ಕೇಳಿ ನಾನು ಹೇಳುವೆ. ಕಾಂಗ್ರೇಸ್ ನ ಒಂದು ಕುಟುಂಬಕ್ಕೆ ಒಂದು ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಬಂದಾಗ ಮಹಾತ್ಮ ಗಾಂಧಿ ಕಾಂಗ್ರೆಸ್ ಮುಂದೆ ಒಂದು ಪ್ರಶ್ನೆ ಇಟ್ಟರು.  ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಇದು ರಾಜಕೀಯ ಪಕ್ಷ ಅಲ್ಲ ಇದು ಬ್ರಿಟಿಷರ ವಿರುದ್ಧ ಹೋರಾಟದ ವೇದಿಕೆ ಆ ಮಾತನ್ನು ಅವರು ಕೇಳಲಿಲ್ಲ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತಿಯತೆ ಕುಟುಂಬ ರಾಜಕಾರಣ ಇವೆಲ್ಲವನ್ನು ಬಿತ್ತು ಬೆಳಸಿದ್ದು ಕಾಂಗ್ರೆಸ್ ಪಕ್ಷ. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆ ಎಲ್ಲಾ ಉಳಿದೆಲ್ಲ ಪ್ರಾದೇಶಿಕ ಪಕ್ಷಗಳು ಅನುಸರಿಸಿದರು ಎಂದರು.

ನಿಜವಾಗಿಯೂ ಜ್ಞಾನೋದಯ ಆಗಿದ್ದರೆ ಆತಂಕದ ಚುನಾವಣೆ ನಡೆಸಲಿ.  ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲಿ. ಒಂದು ಕುಟುಂಬದ ಹಿಡಿತದಲ್ಲಿ ಎರಡು ದಶಕದಿಂದ ಕಾಂಗ್ರೆಸ್ ಪಕ್ಷ ಇದೆ. ನೆಹರು ಇಂದಿರಾಗಾಂಧಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಏನು ಮೆಸೇಜ್ ಕೊಡುತ್ತಾರೆ. ವಂಶ ಪಾರಂಪರ್ಯ ರಾಜಕಾರಣ ಮೆಸೇಜ್ ಕೊಡುತ್ತಾರ ?  ಭ್ರಷ್ಟಾಚಾರ ಬಿತ್ತಿದ್ದು ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next