Advertisement

ಯಾರಿಗೆ ಒಲಿಯುತ್ತೆ IPL ಟ್ರೋಫಿ : ಇಂದು ಮದಗಜಗಳ ಕಾದಾಟ

08:41 AM Oct 15, 2021 | Team Udayavani |

ಐಪಿಎಲ್​ ನ ರಣರೋಚಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ ಭಾರೀ ನಿರೀಕ್ಷೆಯ ಫೈನಲ್ ಪಂದ್ಯ  ಇಂದು (ಶುಕ್ರವಾರ) ಸಂಜೆ 7.30ಕ್ಕೆ ನಡೆಯಲಿದೆ. ವಿಶೇಷ ಅಂದ್ರೆ ಈ ಬಾರಿ ​​​​​​​​​ ಫೈನಲ್​ ಕಾದಾಟದಲ್ಲಿ, 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್​ಕಿಂಗ್ಸ್​ ಮತ್ತು 2 ಬಾರಿಯ ಚಾಂಪಿಯನ್ ಕೆಕೆಆರ್​ ಮುಖಾಮುಖಿಯಾಗಿದ್ದಾರೆ.

Advertisement

ಇಂದಿನ ಪಂದ್ಯದ ನಿರೀಕ್ಷೆಯಲ್ಲಿರುವ ಕ್ರಿಕೆಟ್ ಅಭಿಮಾನಿಗಳ ಎದೆಬಡಿತ ಮತ್ತಷ್ಟು ಹೆಚ್ಚಾಗಿದೆ. ಇನ್ನು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಚೆನ್ನೈ, 4ನೇ ಟ್ರೋಫಿಯ ಆಸೆಯಲ್ಲಿದೆ. ಇದಕ್ಕಾಗಿ ತಂಡದಲ್ಲಿನ ಕೆಲ ಬದವಾಣೆಗಳನ್ನು ಮಾಡಿಕೊಂಡು, ಮಾಸ್ಟರ್​ ಪ್ಲಾನ್​​ನೊಂದಿಗೆ ಅಖಾಡಕ್ಕಿಳಿಯುತ್ತಿದೆ. ಜೊತೆಗೆ ಕೆಕೆಆರ್​ ಎದುರಿನ ವೈಫಲ್ಯ, ಧೋನಿಗೆ ಹೊಸ ತಲೆ ನೋವನ್ನು ಕೊಟ್ಟಿದೆ ಎಂದರೆ ತಪ್ಪಾಗಲ್ಲ.

ಇತ್ತ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ಕೊಲ್ಕತ್ತಾ, ಬಲಿಷ್ಠ ತಂಡಗಳಿಗೆ ಟಕ್ಕರ್ ನೀಡಿದೆ. ಕಳೆದ ನಾಲ್ಕು ಪಂದ್ಯಗಳಿಂದ ಸೋಲನ್ನೇ ಅರಿಯದ ಮಾರ್ಗನ್ ಪಡೆ, ತಾನೆಷ್ಟು ಅಪಾಯಕಾರಿ ಅನ್ನೋದನ್ನ ಸಾಭೀತು ಪಡಿಸುತ್ತಿದೆ.  ಅದೇನೆ ಇರಲಿ ಇಂದು () ನಡೆಯುವ ಐಪಿಎಲ್  ಪಂದ್ಯದಲ್ಲಿ ಯಾವ ತಂಡ ಟ್ರೋಫಿಗೆ ಮುತ್ತಿಡುತ್ತೆ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next