Advertisement

ಸಿಎಸ್ ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿಗೂ ಕೋವಿಡ್ ಪಾಸಿಟಿವ್

04:54 PM May 05, 2021 | Team Udayavani |

ಹೊಸದಿಲ್ಲಿ: ಕೋವಿಡ್ ಕಾರಣದಿಂದ ಈ ಬಾರಿಯ ಐಪಿಎಲ್ ಕೂಟವನ್ನೇ ಸದ್ಯಕ್ಕೆ ಅಮಾನತು ಮಾಡಲಾಗಿದೆ. ಆದರೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಇನ್ನೂ ವರದಿಯಾಗುತ್ತಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಅವರಿಗೂ ಕೋವಿಡ್ ಪಾಸಿಟಿವ್ ಆಗಿದೆ.

Advertisement

ಎರಡು ದಿನಗಳ ಹಿಂದೆ ಸಿಎಸ್ ಕೆ ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಸಿಇಓ ವಿಶ್ವನಾಥನ್ ಮತ್ತು ಬಸ್ ಕ್ಲೀನರ್ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ಬಳಿಕ ಸಿಇಓ ವಿಶ್ವನಾಥನ್ ಅವರ ವರದಿ ನೆಗೆಟಿವ್ ಆಗಿತ್ತು.

ಇದನ್ನೂ ಓದಿ:ಐಪಿಎಲ್ ಅಮಾನತು: ವಿದೇಶಿ ಆಟಗಾರರನ್ನು ಮನೆಗೆ ಕಳುಹಿಸುವುದು ಹೇಗೆ?

ಈ ಬಾರಿಯ ಐಪಿಎಲ್ ನ್ನು ಆರು ನಗರದಲ್ಲಿ ಆಯೋಜಿಸಲಾಗಿತ್ತು. ಆಟಗಾರರು ಸಂಪೂರ್ಣ ಬಯೋ ಬಬಲ್ ನಲ್ಲಿದ್ದರೂ ಹಲವು ಆಟಗಾರರಿಗೆ ಕೋವಿಡ್ ಪಾಸಿಟಿವ್ ಆಗಿತ್ತು.

ಕೆಕೆಆರ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಡೆಲ್ಲಿ ಕ್ಯಾಪಿಟಲ್ಸ್ ನ ಅಮಿತ್ ಮಿಶ್ರಾ, ಸನ್ ರೈಸರ್ಸ್ ಹೈದರಾಬಾದ್ ತಂಡದ ವೃದ್ಧಿಮಾನ್ ಸಾಹಾ ಗೂ ಕೋವಿಡ್ ಪಾಸಿಟಿವ್ ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next