Advertisement

ಕೋವಿಡ್‌ನ‌ 73 ಹೊಸ ರೂಪ ಪತ್ತೆ

12:15 AM Aug 16, 2020 | mahesh |

ಭುವನೇಶ್ವರ: ವಂಶವಾಹಿ ಹಾಗೂ ಜೀನೋಮುಗಳ ಅಧ್ಯಯನ ಮಾಡುವ ಭಾರತದ ವಿಶೇಷಜ್ಞರ ತಂಡವೊಂದು ಒಡಿಶಾದಲ್ಲಿ ಕೊರೊನಾದ 73 ಹೊಸ ಸ್ವರೂಪಗಳನ್ನು ಪತ್ತೆಹಚ್ಚಿದೆ.

Advertisement

ಸಿಎಸ್‌ಐಆರ್‌ ಮತ್ತು ಜೀವ ವಿಜ್ಞಾನ ಸಂಸ್ಥೆ ಐಜಿಐಬಿರ್‌ ಸಂಶೋಧಕರ ತಂಡವು ಭುವನೇಶ್ವರದ ಎಸ್‌ಯುಎಂ ಆಸ್ಪತ್ರೆಯ ಜತೆಗೆ ನಡೆಸಿದ ಈ ಸಂಶೋಧನೆ ಕೊರೊನಾ ಕುರಿತು ಮತ್ತಷ್ಟು ಅರಿವು ಮೂಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.

“”752 ಕ್ಲಿನಿಕಲ್‌ ಮಾದರಿಗಳ ಪರೀಕ್ಷೆ ಮತ್ತು 1536 ಮಾದರಿಗಳ ಅನುಕ್ರಮವನ್ನು ತಯ್ನಾರು ಮಾಡಿದ ಈ ಸಂಶೋಧನಾ ತಂಡಕ್ಕೆ ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ವೈರ‌ಸ್‌ನ 1.112 ಮತ್ತು ಬಿ 1.99 ಎಂಬ ರೂಪಾಂತರಗಳು ಪತ್ತೆಯಾಗಿವೆ” ಎನ್ನುತ್ತಾರೆ ಈ ಸಂಶೋಧನಾ ತಂಡದ ಪ್ರಮುಖ ಮಾರ್ಗದರ್ಶಕ ಡಾ. ಜಯಶಂಕರ್‌ ದಾಸ್‌.

ಈ ರೀತಿಯಲ್ಲಿ ಕೊರೊನಾ ವೈರಸ್‌ನ ವಿಸ್ತೃತ ಗುಣವನ್ನು ಅಧ್ಯಯನ ಮಾಡುವುದರಿಂದಾಗಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ ಎಂದೂ ದಾಸ್‌ ಹೇಳುತ್ತಾರೆ. ಇದಷ್ಟೇ ಅಲ್ಲದೇ, ಐಎಂಎಸ್‌ ಮತ್ತು ಎಸ್‌ಯೂಎಂ ಸಂಸ್ಥೆಗಳ ಸಂಶೋಧಕರು ಜೀನೋಮ್‌ ಸೀಕ್ವೆನ್ಸ್‌ಗಳ ಮೇಲೂ ಕೆಲಸ ಮಾಡುತ್ತಿದ್ದು, ಲಘು, ಮಧ್ಯಮ ಮತ್ತು ಗಂಭೀರ ಸ್ತರದಲ್ಲಿ ರೋಗ ತೀವ್ರತೆಯನ್ನು ಅರಿತುಕೊಳ್ಳುವುದಕ್ಕಾಗಿ 500 ಜೀನೋಮುಗಳ ವಿಶ್ಲೇಷಣೆಯೂ ನಡೆದಿದೆ. ಇದರಿಂ ದಾಗಿ ಸೋಂಕು ಪ್ರಸರಣದ ಕುರಿತೂ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next