Advertisement

ಜನಾಂಗೀಯ ನಿಂದನೆ: ಮಂಡಿಯೂರಲು ಡಿ ಕಾಕ್‌ ನಕಾರ!

10:59 PM Oct 26, 2021 | Team Udayavani |

ದುಬಾೖ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿಯೆತ್ತಲು ಕ್ರಿಕೆಟ್‌ ತಂಡಗಳು ನಿರ್ಧರಿಸಿವೆ.

Advertisement

ಆದರೆ ಮಂಗಳವಾರ ವಿಂಡೀಸ್‌-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಗೊಂದಲ ಉದ್ಭವಿಸಿದೆ. ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್‌ ಡಿ ಕಾಕ್‌ ಮಂಡಿಯೂರಿ ಕುಳಿತು ವರ್ಣಭೇದವನ್ನು ವಿರೋಧಿಸಲು ತಿರಸ್ಕರಿಸಿದ್ದಾರೆ. ಮಾತ್ರವಲ್ಲ, ಪಂದ್ಯದಿಂದಲೇ ಹೊರಗುಳಿದರು!

ಇದರಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತಬ್ಬಿಬ್ಟಾಗಿದೆ. ಮುಂದೇನು ಕ್ರಮ ತೆಗೆದುಕೊಳ್ಳ ಬೇಕೆಂದು ಯೋಚಿಸುತ್ತಿದೆ.
ಕೂಟದ ಮೊದಲ ದಿನವಾದ ಶನಿವಾರ ಇಂಗ್ಲೆಂಡ್‌-ಇಂಡೀಸ್‌ ತಂಡಗಳು ಮಂಡಿಯೂರಿ ವರ್ಣ ಭೇದವನ್ನು ವಿರೋಧಿಸಿದ್ದವು. ರವಿವಾರ ಭಾರತ-ಪಾಕಿಸ್ಥಾನ ಆಟಗಾರರೂ ಇದನ್ನು ಅನುಸರಿ ಸಿದ್ದರು. ಆದರೆ ಮಂಗಳವಾರದ ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಡಿ ಕಾಕ್‌ ಇದನ್ನು ನಿರಾಕರಿಸಿದರು.

ಇದನ್ನೂ ಓದಿ:ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ

ಹಿಂದೆಯೂ ವಿರೋಧ
ಈ ಹಿಂದೆಯೂ ಡಿಕಾಕ್‌ ಇದನ್ನು ವಿರೋಧಿಸಿದ್ದರು. “ವಿರೋಧ ಮಾಡುವುದು ಪ್ರತಿಯೊಬ್ಬರ ನಿರ್ಧಾರವಾಗಬೇಕು. ಅದನ್ನು ಯಾರ ಮೇಲೂ ಯಾರೂ ಒತ್ತಾಯಪೂರ್ವಕವಾಗಿ ಹೇರುವಂತಿಲ್ಲ. ಪ್ರತಿಯೊಂದನ್ನೂ ನಾನು ನಿರ್ಧರಿಸುವುದು ಹೀಗೆ’ ಎಂದು ಹೇಳಿಕೊಂಡಿದ್ದರು. ಈ ನಿಲುವನ್ನೇ ಡಿ ಕಾಕ್‌ ಈಗ ಮುಂದುವರಿಸಿದ್ದಾರೆ.

Advertisement

ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ, ಆಟಗಾರರೆಲ್ಲರಿಗೂ ಜನಾಂಗೀಯ ನಿಂದನೆಯನ್ನು ವಿರೋಧಿಸಬೇಕೆಂದು ಆದೇಶ ನೀಡಿದೆ. ಆ ದೇಶ ಹಿಂದೆಯೂ ವರ್ಣಭೇದದ ಇಕ್ಕಟ್ಟಿಗೆ ಸಿಲುಕಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next