Advertisement
ಮತ್ತೆ ಮರಳುಗಾರಿಕೆಗೆ ಹೊಸದಾಗಿ ಪ್ರಕ್ರಿಯೆಗಳು ನಡೆಯ ಬೇಕಿವೆ. ನಾನ್‌ಸಿಆರ್‌ಝಡ್‌ನ 16 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಮುಂದುವರಿಯಲಿದೆ. ಜಿಲ್ಲೆಯ ಸಿಆರ್‌ಝಡ್‌ನಲ್ಲಿ ನವೆಂಬರ್‌ನಿಂದ ಈ ವರೆಗೆ 2,35,414 ಮೆಟ್ರಿಕ್ ಟನ್ ಮರಳು ತೆರವುಗೊಳಿಸಲಾಗಿದೆ.
Related Articles
Advertisement
ನಾನ್‌ಸಿಆರ್‌ಝಡ್‌ನಲ್ಲಿ ಗುರುತಿಸಲಾದ 58 ಬ್ಲಾಕ್‌ಗಳಿವೆ. 16 ಬ್ಲಾಕ್ ಗಳು ಕಾರ್ಯಾಚರಿಸುತ್ತಿವೆ. 9 ಬ್ಲಾಕ್‌ಗಳನ್ನು ಸರಕಾರಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಸಿಆರ್‌ಝಡ್‌ನಲ್ಲಿ ಮರಳುಗಾರಿಕೆ ಆರಂಭ
ವಾಗುವವರೆಗೆ ಇಲ್ಲಿಂದ ಪೂರೈಕೆ ಆಗಲಿದೆ. ನಿಯಮಗಳ ಪ್ರಕಾರ ಮರಳು ಸಂಗ್ರಹಿಸಿ ಇಡಲು ಅವ ಕಾಶ ವಿಲ್ಲ. ನಿರ್ಮಾಣಗಾರರು ಪರವಾ ನಿಗೆ ಮೂಲಕ ಪಡೆದಿರುವ ಮರಳನ್ನು ಯಾರ್ಡ್‌ನಲ್ಲಿ ಸಂಗ್ರಹಿಸಿ ಡಲು ಅವಕಾಶವಿದೆ. ಸಿಆರ್‌ಝಡ್ ನಲ್ಲಿ ಮರಳುಗಾರಿಕೆ ಅನು ಮತಿ ಪ್ರಕ್ರಿಯೆ ವಿಳಂಬವಾದರೆ ಮರಳು ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ.
ಹೊಸದಾಗಿ ಪ್ರಕ್ರಿಯೆ ಬಳಿಕ ಆರಂಭ:
ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಯ ಸಿಆರ್‌ಝಡ್‌ನಲ್ಲಿ ಮತ್ತೆ ಬ್ಯಾಥಮೆಟ್ರಿಕ್ಸ್ ಸರ್ವೇ ನಡೆದು ಮರಳು ದಿಬ್ಬಗಳನ್ನು ಗುರು ತಿಸಿ ತಾಂತ್ರಿಕ ವರದಿ ಪಡೆಯ ಲಾಗು ತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆ ¿ ುಲ್ಲಿರುವ ಜಿಲ್ಲಾ ಮರಳು ಉಸ್ತು ವಾರಿ ಸಮಿತಿಯು ವರದಿ ಯನ್ನು ಪರಿಶೀಲಿಸಿ ಕೆಸಿಝಡ್‌ಎಂಗೆ ಕಳುಹಿಸುತ್ತದೆ. ಅದು ಪರಿ ಶೀಲಿಸಿ ಅನುಮೋದಿಸಿದ ಬಳಿಕ ಮರಳುಗಾರಿಕೆ ಆರಂಭವಾಗುತ್ತದೆ. ಆದರೆ ಈ ಬಾರಿ ಕಳೆದ ವರ್ಷ ನೀಡಿರುವ ಪರಿಸರ ವಿಮೋಚನ ಪತ್ರವನ್ನೇ ಮುಂದುವರಿಸಿ ಮರಳುಗಾರಿಕೆಗೆ ಅವಕಾಶ ನೀಡುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಯುತ್ತಿದೆ.
ಸದ್ಯದಲ್ಲೇ ನಿರ್ಧಾರ :
ಸಿಆರ್‌ಝಡ್ ವಲಯದಲ್ಲಿ ಮರಳು ದಿಬ್ಬ ತೆರವುಗೊಳಿಸಲು ಕೆಸಿಝಡ್‌ಎಂ ನೀಡಿರುವ ಪರಿಸರ ವಿಮೋಚನ ಪತ್ರ ಸೆ. 16ಕ್ಕೆ ಮುಗಿಯಲಿದೆ. ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿನಿರ್ಧಾರಗಳನ್ನು ಕೈಗೊಳ್ಳಲಿದೆ.-ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರು
ಸಿಆರ್‌ಝಡ್ ಮರಳುಗಾರಿಕೆ ಮುಕ್ತಾಯ ಹಿನ್ನೆಲೆಯಲ್ಲಿ ಸೆ. 13ರ ಬಳಿಕ ಬೆಂಗಳೂರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರನ್ನು ಭೇಟಿಯಾಗಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ. ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ಸಂಬಂಧಪಟ್ಟು ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಕೋರಲಾಗುವುದು. - ಎಸ್. ಅಂಗಾರ, ಬಂದರು, ಮೀನುಗಾರಿಕಾ ಖಾತೆ ಸಚಿವರು