Advertisement
2019ರ ಜ. 18ರಂದು ಕೇಂದ್ರ ಸರಕಾರ ಸಿಆರ್‌ಝಡ್ ಅಧಿಸೂಚನೆ-2019ನ್ನು ಪ್ರಕಟಿಸಿತ್ತು. ಈ ನಿಯಮಾವಳಿಯನ್ನೇ ಮುಂದಿನ ದಿನಗಳಲ್ಲಿ ಜಾರಿಗೆ ತರಬೇಕು ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ತಿಳಿಸಿತ್ತು. ಆದರೆ ನಕ್ಷೆ ಮಾತ್ರ ಜಾರಿಯಾಗಿರಲಿಲ್ಲ. ಕೊರೊನಾ ಕಾರಣದಿಂದ ನಕ್ಷೆ ರಚನೆ ತಡವಾಗಿತ್ತು ಎಂದು ಇಲಾಖೆಗಳಲ್ಲಿ ಸುದ್ದಿಯಾಗಿ ತ್ತು. ಇದೀಗ ಕರಡು ನಕ್ಷೆ ಪೂರ್ಣಗೊಂಡಿರುವ ಬಗ್ಗೆ ಕೇಂದ್ರದಿಂದ ಕರಾವಳಿಗೆ ಮಾಹಿತಿ ಲಭಿಸಿದೆ.
Related Articles
Advertisement
1991ರ ಸಿಆರ್‌ಝಡ್ ಅಧಿಸೂಚನೆ :
1991ರ ಸಿಆರ್‌ಝಡ್ ಅಧಿಸೂಚನೆ ಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ 2006ರಲ್ಲಿ ಕರಾವಳಿ ನಿರ್ವಹಣ ವಲಯ (ಸಿಎಂಝಡ್ ) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಇದರಲ್ಲಿ ಸಿಆರ್‌ಝಡ್‌ನ “ನಿಯಂತ್ರಣ’ ಎಂಬ ಪದವನ್ನು ತೆಗದು “ನಿರ್ವಹಣೆ’ ಎಂದು ಸೇರಿಸಲಾಗಿತ್ತು. ಈ ಅಧಿಸೂಚನೆಯ ಮೇಲೆ ಬಹಳಷ್ಟು ಚರ್ಚೆಗಳು ನಡೆದು, ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಿಎಂಝಡ್ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು 1991ರ ಸಿಆರ್‌ಝಡ್ ಅಧಿಸೂಚನೆಯಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ 2011ರಲ್ಲಿ ಮತ್ತೆ ಅನುಷ್ಠಾನಕ್ಕೆ ತಂದಿದೆ. ಇದರ ಆಧಾರದ ಮೇಲೆ 2018ರ ಜುಲೈಯಲ್ಲಿ ಹೊಸ ನಕ್ಷೆ ಸಿದ್ಧಗೊಂಡಿತ್ತು. ಇದಾದ ಕೆಲವೇ ತಿಂಗಳಲ್ಲಿ ಕೇಂದ್ರವು ಹೊಸ ಅಧಿಸೂಚನೆ ಹೊರಡಿಸಿದ ಕಾರಣದಿಂದ ಇದೀಗ ಹೊಸ ನಕ್ಷೆ ರಚನೆಯಾಗುತ್ತಿದೆ.
ಕರಡು ಸಿದ್ಧವಾದರೂ ಅನುಮೋದನೆಗೆ 6 ತಿಂಗಳುಗಳು ಬೇಕು! :
ನಕ್ಷೆಯ ಕರಡು ಸಿದ್ಧವಾದ ಬಳಿಕ ಮೂರು ಜಿಲ್ಲೆಗಳ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯಲಾಗುತ್ತದೆ. ಜಿಲ್ಲಾಧಿ ಕಾರಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸಭೆ ನಡೆಯಲಿದೆ. ಕರಡು ನಕ್ಷೆ ಕುರಿತಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಪೂರ್ಣವರದಿಯನ್ನು ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ನೀಡಲಿದೆ. ರಾಜ್ಯ ಸರಕಾರದಿಂದ ಪರಿ ಶೀಲನೆಯಾಗಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಕೇಂದ್ರ ಸರಕಾರವು ವರದಿಗೆ ಅನುಮೋದನೆ ನೀಡಲಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣ ಗೊಳ್ಳಲು ಕನಿಷ್ಠ 6 ತಿಂಗಳುಗಳು ಬೇಕಾಗಬಹುದು.
2019ರ ಜನವರಿಯಲ್ಲಿ ಕೇಂದ್ರ ಸರಕಾರ ಹೊಸದಾಗಿ ಸಿಆರ್‌ಝಡ್ ಅಧಿಸೂಚನೆ ಹೊರಡಿಸಿದೆ. ಇದರ ಕರಡು ನಕ್ಷೆ ತಿಂಗಳೊಳಗೆ ಲಭಿಸುವ ಬಗ್ಗೆ ಮಾಹಿತಿಯಿದೆ. ಇಲ್ಲಿಯವರೆಗೆ 2011ರ ನಿಯಮಾವಳಿಯ ನಕ್ಷೆಯೇ ಜಾರಿಯಲ್ಲಿದೆ. ಕರಡು ನಕ್ಷೆ ಬಂದ ಬಳಿಕ ಆಕ್ಷೇಪಣೆ ಸ್ವೀಕರಿಸಿ ರಾಜ್ಯ-ಕೇಂದ್ರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗುವುದು. -ಡಾ| ವೈ.ಕೆ. ದಿನೇಶ್ ಕುಮಾರ್, ಪ್ರಾದೇಶಿಕ ನಿರ್ದೇಶಕರು, ದ.ಕ. ಪರಿಸರ ಇಲಾಖೆ