Advertisement

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ

09:01 PM Jan 18, 2022 | Team Udayavani |

ನವದೆಹಲಿ: ಬಜೆಟ್‌ ಅಧಿವೇಶನದಲ್ಲಿ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ ಮಂಡನೆಯಾಗುವುದು ಅನುಮಾನ. ಅದರ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರವಷ್ಟೇ ಕರಡು ನಿಯಮಗಳನ್ನು ರೂಪಿಸಬೇಕಿದೆ.

Advertisement

ಹಾಗೆ ರೂಪಿಸುವ ನಿಯಮಾವಳಿಗಳಿಗೆ ಕೇಂದ್ರದ ಹಿರಿಯ ತಜ್ಞರ ಸರ್ವಾನುಮತದ ಒಪ್ಪಿಗೆ ಪಡೆಯಬೇಕಿದೆ. ಇದಾದ ನಂತರವಷ್ಟೇ ಮಸೂದೆಗೆ ಅಂತಿಮ ಸ್ವರೂಪ ನೀಡಲು ಸಾಧ್ಯ.

ಇದಕ್ಕೆಲ್ಲಾ ಸಾಕಷ್ಟು ಕಾಲಾವಕಾಶ ಬೇಕಿದೆ. ಜೊತೆಗೆ, ಕೆಲವೇ ತಿಂಗಳುಗಳಲ್ಲಿ ಆರ್‌ಬಿಐ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಿರುವ ದೇಶೀಯ ಕ್ರಿಪ್ಟೋ ಕರೆನ್ಸಿಯ ಸಕಾರಾತ್ಮಕ-ನಕಾರಾತ್ಮಕ ಅಂಶಗಳನ್ನು ಅಧ್ಯಯನ ನಡೆಸಿ, ನಂತರವಷ್ಟೇ ವಿಧೇಯಕ ಮಂಡನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ:ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next