Advertisement

ಗುಪ್ತಾಂಗ ಕತ್ತರಿಸಿದ ಮಹಿಳೆ!

06:00 AM Nov 11, 2018 | |

ಭುವನೇಶ್ವರ: ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ಗುಪ್ತಾಂಗವನ್ನೇ ಮಹಿಳೆ ಕತ್ತರಿಸಿದ ಪ್ರಕರಣ ಒಡಿಶಾದ ಕೊಯೆಂಝರ್‌ನಲ್ಲಿ ವರದಿಯಾಗಿದೆ. 25 ವರ್ಷದ ರಾಜೇಂದ್ರ ನಾಯಕ್‌ನೊಂದಿಗೆ ಮಹಿಳೆ ವಿವಾಹೇತರ ಸಂಬಂಧ ಹೊಂದಿದ್ದಳು. ಚೆನ್ನೈಯಲ್ಲಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ರಾಜೇಂದ್ರ, ರಜೆಯಲ್ಲಿ ಮಹಿಳೆಯ ಮನೆಗೆ ಆಗಮಿಸಿದ್ದ. ಈ ವೇಳೆ ಬುಧವಾರ ರಾತ್ರಿ ಯಾವುದೋ ವಿಷಯಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ರಾಜೇಂದ್ರ ರಾತ್ರಿ ನಿದ್ರೆಯಲ್ಲಿದ್ದಾಗ, ಇದೇ ಸಿಟ್ಟಿನಲ್ಲಿ ಚಾಕುವಿನಿಂದ ಗುಪ್ತಾಂಗವನ್ನು ಮಹಿಳೆ ಕತ್ತರಿಸಿದ್ದಾಳೆ. ಮಹಿಳೆಯನ್ನು ಬಂಧಿಸಲಾಗಿದ್ದು, ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ತೀವ್ರ ರಕ್ತ ಸ್ರಾವದಿಂದ ಬಳಲಿರುವ ರಾಜೇಂದ್ರನನ್ನು ಕೆಯೊಂಝರ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ಕಟಕ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next