Advertisement

ನಾಲೆಗೆ ಬಿದ್ದ ಕೂಲಿ ಕೆಲಸಗಾರರಿದ್ದ ಕ್ರೂಸರ್: ಸ್ಥಳದಲ್ಲೇ ಏಳು ಜನರ ಸಾವು, ಮೂವರು ಗಂಭೀರ

10:12 AM Jun 26, 2022 | Team Udayavani |

ಬೆಳಗಾವಿ: ಕೂಲಿ ಕೆಲಸಗಾರರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನವೊಂದು ನಾಲಾಗೆ ಬಿದ್ದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಬೆಳಗಾವಿಯಲ್ಲಿ ನಡೆದಿದೆ.

Advertisement

ಬೆಳಗಾವಿ ತಾಲೂಕಿನ ಕಣಬರಗಿ ಬಳಿಯ ಕಲ್ಯಾಳ ಪುಲ್ ಬಳಿ ಘಟನೆ ನಡೆದಿದ್ದು, ಒಟ್ಟು 12 ಜನರು ಕೂಲಿ ಕೆಲಸಕ್ಕೆಂದು ಅಕ್ಕತಂಗೇರಹಾಳದಿಂದ ಬೆಳಗಾವಿಗೆ ಆಗಮಿಸುತ್ತಿದ್ದರು.

ಗೋಕಾಕ ತಾಲೂಕಿನ ಬಸನು ಹನಮನ್ನವರ, ಫಕೀರಪ್ಪ ಕಳಸನ್ನವರ, ಅಡಿವೆಪ್ಪ ಚಿಲಬಾವಿ, ಕರೆಪ್ಪ ರಾಮಣ್ಣ ಗಸ್ತಿ, ಬಸವರಾಜ ಚಂದ್ರಪ್ಪ ದಳವಿ, ದಾಸನಟ್ಟಿ ಗ್ರಾಮದ ಕೃಷ್ಣಾ ಕಂಡೂರಿ ಸೇರಿದಂತೆ ಏಳು ಜನ ಮೃತಪಟ್ಟಿದ್ದಾರೆ.‌

ಇದನ್ನೂ ಓದಿ:ಬೈಕ್ ನಲ್ಲಿ  ಜಾಲಿ ರೈಡ್: ಬಿಡ್ಜ್ ನಿಂದ ಬಿದ್ದು ಸಾಪ್ಟ್ ವೇರ್ ಎಂಜಿನಿಯರ್ ಸಾವು

ಕಲ್ಯಾಳ ಪುಲ್ ಬಳಿ ನಿಯಂತ್ರಣ ತಪ್ಪಿದ ಕ್ರೂಸರ್ ಬಳ್ಳಾರಿ ನಾಲಾಕ್ಕೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಏಳು ಜನ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವರನ್ನೂ ಸ್ಥಳೀಯರು, ಪೊಲೀಸರು ಸೇರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

Advertisement

ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next